ಚುನಾವಣಾ ಫಲಿತಾಂಶ: ಬಿಜೆಪಿ ಅಭಿಮಾನಿ ಹೃದಯಾಘಾತದಿಂದ ಸಾವು

0
33

ಹುಬ್ಬಳ್ಳಿ: ಲೋಕಸಭಾ ಚುನಾವಣೆಯಲ್ಲಿ NDA ಗೆ ನಿರೀಕ್ಷಿತ ಸ್ಥಾನ ಸಿಗದ ಹಿನ್ನೆಲೆಯಲ್ಲಿ, ಫಲಿತಾಂಶ ನೋಡಿ ಹೃದಯಾಘಾತದಿಂದ ವ್ಯಕ್ತಿ ಸಾವನ್ನಪಿರುವ ಘಟನೆ ನಡೆದಿದೆ.
ಹುಬ್ಬಳ್ಳಿಯ ಲಿಂಗರಾಜ ನಗರದಲ್ಲಿ ಈ ಘಟನೆ ನಡೆದಿದ್ದು, ಶಿವಪ್ರಕಾಶ ಶಿವರುದ್ರಯ್ಯ ಮಠದ (55) ಎಂಬುವರೆ ಮೃತಪಟ್ಟವರು, ಕಟ್ಟಾ ಬಿಜೆಪಿ ಅಭಿಮಾನಿಯಾಗಿದ್ದ ಶಿವಪ್ರಕಾಶ್ ಹಿರೇಮಠ ಮನೆಯಲ್ಲಿ ಟಿವಿ ನೋಡುವಾಗ ಫಲಿತಾಂಶ ನೋಡುತ್ತಲೆ ಬಿಜೆಪಿಗೆ ನಿರೀಕ್ಷಿತ ಬಹುಮತ ದೊರೆಯದಿದ್ದಾಗ ಘಾಸಿಗೊಂಡ ಇವರು ತೀವ್ರ ಹೃದಯಾಘಾತಕ್ಕೊಳಗಾಗಿ ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಕೆಎಲ್ಇ ಸುಚಿರಾಯು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪ್ರಾಣ ಬಿಟ್ಟಿರುವುದಾಗಿ ತಿಳಿಸಿದ್ದಾರೆ. NDA ಮೂರುನೂರು ಗಡಿ ದಾಟಲಿಲ್ಲ ಎಂದುಕೊಂಡು ಸುದ್ದಿ ತಿಳಿದು ಹೃದಯಾಘಾತದಿಂದ ನಿಧನರಾಗಿದ್ದರೆ.

Previous articleಬೀದರ್‌ನಲ್ಲಿ ಪಾರುಪತ್ಯ ಸಾಧಿಸಿದ ಕಾಂಗ್ರೆಸ್
Next articleಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ರಚನೆ