ಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ ಇಬ್ಬಾಗ

0
12

ಹಾವೇರಿ: ನರೇಂದ್ರ ಮೋದಿಯವರು ಮೂರನೇ ಸಲ ಪ್ರಧಾನಿ ಆದ ಬಳಿಕ ಮೂರು ತಿಂಗಳಲ್ಲಿ ಕಾಂಗ್ರೆಸ್ ಇಬ್ಬಾಗವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೇಳಿದ್ದಾರೆ.
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಚುನಾವಣೆ ಫಲಿತಾಂಶದ ನಂತರ ರಾಜ್ಯದಲ್ಲಿಯು ರಾಜಕಾರಣ ಬದಲಾವಣೆಯಾಗಲಿದೆ. ರಾಜ್ಯ ಸರ್ಕಾರ ಬದಲಾವಣೆಗೆ ನಂಬರ್ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜಕಾರಣದಲ್ಲಿ ನಂಬರ್ ಮಹತ್ವ ಅಲ್ಲ. ಇಂದಿರಾಗಾಂಧಿ ದೇವರಾಜ್ ಅರಸ ನಡುವೆ ವ್ಯತ್ಯಾಸ ಬಂದಾಗ ರಾತ್ರೋ ರಾತ್ರಿ ಎಲ್ಲರೂ ಆರ್. ಗುಂಡುರಾವ್ ಕಡೆಗೆ ಹೋದರು ಎಂದರು.
ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 25 ಸೀಟ್ ಗೇಲ್ಲುತ್ತೇವೆ. ಕೇಂದ್ರದಲ್ಲಿ 400 ಕ್ಕು ಹೆಚ್ಚು ಸ್ಥಾನ ಗೇಲ್ಲುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.

Previous articleಮಾಜಿ ಸಚಿವ ರೇಣುಕಾಚಾರ್ಯಗೆ ಕೊಲೆ ಬೆದರಿಕೆ
Next articleನವಭಾರತದ ಅಧಿನಾಯಕತ್ವಕ್ಕೆ ಜನಾದೇಶದ ಹೊಣೆಗಾರಿಕೆ