ನವದೆಹಲಿ: ಭಾರತೀಯ ಹೆದ್ದಾರಿ ಪ್ರಾಧಿಕಾರ ಈಗ ದೇಶದಾದ್ಯಂತದ ಟೋಲ್‌ಗಳಲ್ಲಿ ವಾಹನ ಸವಾರರಿಂದ ಸಂಗ್ರಹಿಸುವ ಟೋಲ್ ದರದಲ್ಲಿ ಶೇ. ೫ರಷ್ಟು ಹೆಚ್ಚಿಸಲು ನಿರ್ಧರಿಸಿದ್ದು, ಪರಿಷ್ಕೃತ ದರ ವಸೂಲಿ ಸೋಮವಾರದಿಂದ ಆರಂಭವಾಗಿದೆ.
ಟೋಲ್ ದರ ಹೆಚ್ಚಳ ಏಪ್ರಿಲ್ ಒಂದರಿಂದಲೇ ಜಾರಿಗೆ ಬರಬೇಕಿತ್ತು. ಆದರೆ ಲೋಕಸಭಾ ಚುನಾವಣೆಯ ಕಾರಣ ಈ ಜಾರಿಯನ್ನು ಮುಂದೂಡಲಾಗಿತ್ತು.