ವಿದ್ಯುತ್ ಶಾರ್ಟ್ ಸರ್ಕ್ಯೂಟ್‌: ಲಕ್ಷಾಂತರ ರೂ. ಹಾನಿ

0
11

ರಾಯಚೂರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬ್ಯಾಟರಿ ಅಂಗಡಿಯಲ್ಲಿ ಬೆಂಕಿ ಹತ್ತಿಕೊಂಡ ಘಟನೆ ಸೋಮವಾರ ನಗರದ ಮಹಾವೀರ ವೃತ್ತದಲ್ಲಿ ನಡೆದಿದೆ.
ಶಾರ್ಟ್ ಸರ್ಕ್ಯೂಟ್‌ನಿಂದ ಗಿಗಾ ಫೈಬರ್ ಎನ್ನುವ ಇಂಟರ್‌ನೆಟ್ ಆಕ್ಸಸ್ ಅಂಗಡಿ ಮತ್ತು ಎಲೆಕ್ಟ್ರಿಕ್ ಬೈಕ್‌ಗಳ ಅಂಗಡಿಗೆ ಬೆಂಕಿ ಬಿದ್ದು ಹೊತ್ತಿ ಉರಿದಿದೆ. ಬೈಕ್ ಬ್ಯಾಟರಿ ಚಾರ್ಜ್ ಮಾಡುವಾಗ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು ಕ್ಷಣಾರ್ಧದಲ್ಲಿ ಎಲ್ಲ ವಸ್ತುಗಳು ಸುಟ್ಟು ಭಸ್ಮವಾಗಿದೆ.
ಘಟನೆಯಲ್ಲಿ ಮೂರು ಎಲೆಕ್ಟ್ರಿಕ್ ವಾಹನಗಳು, ಎರಡು ಬೈಕ್‌ಗಳು ಬೆಂಕಿಗೆ ಆಹುತಿಯಾಗಿವೆ. ಎರಡು ಅಂತಸ್ತಿನ ಕಟ್ಟಡದಲ್ಲಿ ದಟ್ಟ ಹೊಗೆ ಆವರಿಸಿದ್ದು, ಅಕ್ಕಪಕ್ಕದ ಅಂಗಡಿಗಳಿಗೂ ಬೆಂಕಿ ಹರಡಿಕೊಂಡಿದೆ. ಕಟ್ಟಡದೊಳಗೆ ಕಾರ್ಮಿಕರು ಸಿಲುಕಿಕೊಂಡಿದ್ದರು. ಶ್ರೀನಿವಾಸ ಎನ್ನುವ ಕಾರ್ಮಿಕ ಮೇಲಿನಿಂದ ಜಿಗಿದಿದ್ದು, ಕಾಲಿಗೆ ಪೆಟ್ಟಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.

Previous articleನಡು ರಸ್ತೆಯಲ್ಲಿ ನಮಾಜ್: ಖಂಡನೆ
Next articleನೇಹಾ, ಅಂಜಲಿ ಹತ್ಯೆಯ ಮಾಹಿತಿ ಪಡೆದ ಸಿಐಡಿ ಡಿಜಿಪಿ