ರಾಹುಲ್ ಗಾಂಧಿ ಇದ್ದ ವೇದಿಕೆ ಕುಸಿತ…

0
21

ಬಿಹಾರದಲ್ಲಿ ಚುನಾವಣಾ ಪ್ರಚಾರ ವೇಳೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಇರುವ ವೇದಿಕೆ ಏಕಾಎಕಿ ಕುಸಿದ ಘಟನೆ ನಡೆದಿದೆ,
ಏಳನೇ ಮತ್ತು ಕೊನೆಯ ಹಂತದ ಲೋಕಸಭಾ ಚುನಾವಣೆಗೆ ರಾಹುಲ್ ಗಾಂಧಿ, ತೇಜಸ್ವಿ ಯಾದವ್ ಇದ್ದರು. ಬಿಹಾರದ ಪಾಟ್ನಾ ಸಾಹಿಬ್, ಪಾಟ್ಲಿಪುತ್ರ ಮತ್ತು ಅರಾ ಲೋಕಸಭಾ ಕ್ಷೇತ್ರಗಳಲ್ಲಿ ಮೂರು ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲು ಗಾಂಧಿ ಅಲ್ಲಿಗೆ ಬಂದಿದ್ದರು. ವೇದಿಕೆಗೆ ಪ್ರವೇಶಿಸಿದಾಗ ಈ ಘಟನೆ ಸಂಭವಿಸಿದೆ ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಅಂಗರಕ್ಷಕರೊಂದಿಗೆ ರಾಹುಲ್ ಗಾಂಧಿ ವೇದಿಕೆಯ ಮತ್ತೊಂದು ದಿಕ್ಕಿನತ್ತ ಸಾಗುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದ್ದು, ಅದು ಕುಸಿದಾಗ ಅವರು ತಬ್ಬಿಬ್ಬಾದರು. ಆದರೆ, ‘ರಾಹುಲ್ ಗಾಂಧಿ ಜಿಂದಾಬಾದ್’ ಎಂದು ಘೋಷಣೆ ಕೂಗುತ್ತಿರುವ ಜನಸಾಗರದತ್ತ ಕೈ ಬಿಸುತ್ತ ಸಾಗಿದ್ದಾರೆ.

Previous articleಕಮಿಷನ್ ದಾಹಕ್ಕೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು
Next articleರೈಲ್ವೆ ಹಳಿಗೆ ಬಿದ್ದು ಪೊಲೀಸ್ ಕಾನ್ ಸ್ಟೇಬಲ್ ಆತ್ಮಹತ್ಯೆ