ಗೃಹ ಸಚಿವರ ವಾಹನಕ್ಕೆ ಘೇರಾವ್

0
9

ಹುಬ್ಬಳ್ಳಿ: ಡಿಸಿಪಿ ವರ್ಗಾವಣೆ ರದ್ದು ಕೋರಿ ಗೃಹ ಸಚಿವ ಡಾ. ಜಿ ಪರಮೇಶ್ವರ ವಾಹನಕ್ಕೆ ಘೇರಾವ್ ಹಾಕಿದ ಘಟನೆ ಸೋಮವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನಡೆಯಿತು.
ಗೃಹ ಸಚಿವರ ಆಗಮನಕ್ಕಾಗಿಯೇ ಕಾದು ಕುಳಿತಿದ್ದ ಆದಿ ಜಾಂಬವ ಸಮುದಾಯದ ಮುಖಂಡರು, ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್‌ನ ಕಾನೂನು ಸುವ್ಯವಸ್ಥೆ ಡಿಸಿಪಿ ರಾಜೀವ್ ವರ್ಗಾವಣೆಯನ್ನು ರದ್ದುಪಡಿಸುವಂತೆ ಆಗ್ರಹಿಸಿ, ಕೆಲ‌ಕಾಲ ಪ್ರತಿಭಟನೆ ನಡೆಸಿದರು.
ಕೊನೆಗೆ ವಾಹನದಿಂದ ಕೆಳಗಿಳಿದು ಬಂದ ಪರಮೇಶ್ವರ್, ಪ್ರತಿಭಟನಾ ನಿರತರನ್ನು ಸಮಾಧಾನ ಪಡಿಸಿದರು. ಗೃಹ ಸಚಿವರು ನೀಡಿದ ಸಮಜಾಯಿಶಿಯಿಂದ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

Previous articleಅಂಜಲಿ ಹತ್ಯೆ ಪ್ರಕರಣ: ಮತ್ತೋರ್ವ ಅಧಿಕಾರಿ ಸಸ್ಪೆಂಡ್
Next articleಹು-ಧಾ ಡಿಸಿಪಿಯಾಗಿ ಕುಶಲ್ ಚೌಕ್ಸೆ ಅಧಿಕಾರ ಸ್ವೀಕಾರ