ಗೃಹ ಸಚಿವರಿಂದ ಪರಿಹಾರದ ಭರವಸೆ

0
8

ಹುಬ್ಬಳ್ಳಿ: ಮೃತ ಯುವತಿ ಅಂಜಲಿ ಅಂಬಿಗೇರ್ ನಿವಾಸಕ್ಕೆ ಭೇಟಿ ನೀಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅಂಜಲಿ ಕುಟುಂಬಸ್ಥರಿಗೆ ಪರಿಹಾರದ ಭರವಸೆಯನ್ನು ನೀಡಿದ್ದಾರೆ.
ಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕ ಜೂನ್ 5ರಂದು ಕರೆ ಮಾಡುವ ಮೂಲಕ ಯಾವ ರೀತಿ ಪರಿಹಾರ ನೀಡುವುದಾಗಿ ತಿಳಿಸಲಿದ್ದಾರೆ.
ಕೊಲೆ ಆರೋಪಿ ಗಿರೀಶ್ ಸಾವಂತನಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಮೃತಳ ಅಜ್ಜಿ ಗಂಗಮ್ಮ ಗೃಹ ಸಚಿವರಲ್ಲಿ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಗೃಹ ಸಚಿವರು ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಭರವಸೆ ನೀಡಿದರು.
ಬಳಿಕ ಅಂಜಲಿ ಸಹೋದರಿಯರ ಜೊತೆ ಮಾತನಾಡಿದ ಅವರು ಓರ್ವರಿಗೆ ಸರ್ಕಾರಿ ಉದ್ಯೋಗ, ಸ್ವಂತ ಸೂರು ಹಾಗೂ ಪರಿಹಾರ ಧನವನ್ನ ನೀಡುವುದಾಗಿ ತಿಳಿಸಿದರು.
ಬಳಿಕ ಸುದ್ದಿಗೋಷ್ಠಿ ನಡೆಸಿದ ಸಚಿವರು, ಅಂಜಲಿ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸುವುದಾಗಿ ಘೋಷಿಸಿದರು.

Previous articleದೇವೇಗೌಡರ ಮೇಲೆ ಗೌರವ ಇದ್ದರೆ ಬಂದು ಶರಣಾಗು
Next articleಯುವ ಕವಿ ಲಕ್ಕೂರು ಆನಂದ ಇನ್ನಿಲ್ಲ