ಶೌಚಾಲಯ ಗೋಡೆ ಕುಸಿದು ಇಬ್ಬರು ಮಹಿಳೆಯರು ಸಾವು

0
10

ಕುಷ್ಟಗಿ: ಶೌಚಾಲಯ ಗೋಡೆಯ ಪಕ್ಕ ಬಹಿರ್ದೆಸೆ ಕುಳಿತ ಮಹಿಳೆಯರ ಮೇಲೆ ಶೌಚಾಲಯದ ಗೋಡೆ ಕುಸಿದು ಇಬ್ಬರು ದುರಂತ ಸಾವನಪ್ಪಿದ ಪ್ರಕರಣ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಐದನೇ ವಾರ್ಡ್‌ನಲ್ಲಿ ನಡೆದಿದೆ.

ತಾವರಗೇರಾದ ಮಸೀದಿ ಮುಂದಿನ ಕುರುಬರ ಓಣಿ ಮಹಿಳಾ ಶೌಚಾಲಯದ ಶಿಥಿಲ ಗೋಡೆ ಇಬ್ಬರನ್ನು ಬಲಿ‌ ಪಡೆದಿದೆ.ಭಾನುಬೇಗಂ (40) ಖಾಜಿ , ಉಮಾಬಾಯಿ ಬಪ್ಪರಗಿ (36) ಮೃತ ದುರ್ದೈವಿ ಮಹಿಳೆಯರು. ಮತ್ತೊಬ್ಬ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಒಂದು ೩-೪ ದಿನಗಳಿಂದ ಮೇಲಿಂದ ಮೇಲೆ
ಮಳೆಯಾಗಿದ್ದರಿಂದ ಗೋಡೆ ಶೀತಲಗೊಂಡಿದ್ದು ಒಂದು ಬದಿಯ ಕಾಂಪೌಂಡ್ ಸಂಪೂರ್ಣ ಮಳೆಯಿಂದ ನೆನೆದು ಹೋಗಿದ್ದು ಇದರಿಂದಾಗಿ ಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ‌.

Previous articleಕಾಶೀಂ ಆರ್ಟ ಗ್ಯಾಲರಿ ಸಂಸ್ಥಾಪಕ ಕಾಶೀಂ ಕನಸಾವಿ ಇನ್ನಿಲ್ಲ
Next articleಐಸ್‌ಕ್ರೀಂ ಮ್ಯಾನ್‌ ಖ್ಯಾತಿಯ ರಘುನಂದನ್‌ ಕಾಮತ್‌ ಇನ್ನಿಲ್ಲ