ನವ ಜೋಡಿ ನೇಣಿಗೆ ಶರಣು

0
11
ಆತ್ಮಹತ್ಯೆ

ವಿಜಯಪುರ: ನಾಲ್ಕು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ದಂಪತಿ ನೇಣಿಗೆ ಶರಣಾದ ಘಟನೆ ನಡೆದಿದೆ.
‌ನಗರದ ಹೊರ ಭಾಗದ ಶ್ರೀ ಸಿದ್ದೇಶ್ವರ ಬಡಾವಣೆಯ ಮನೆಯಲ್ಲಿ ಆ ಯುವ ದಂಪತಿ ನೇಣಿಗೆ ಕೊರಳೊಡ್ಡಿದ್ದಾರೆ. ಮನೋಜಕುಮಾರ ಪೋಳ (30) ಮತ್ತು ರಾಖಿ (23) ನೇಣಿಗೆ ಶರಣಾದ ಜೋಡಿ. ಮನೋಜ್ ಹಾಗೂ ರಾಖಿ ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆ ಜೋಡಿಯಾಗಿದ್ದು, ಮಂಗಳವಾರ ರಾತ್ರಿ ಊಟ ಮಾಡಿದ ಬಳಿಕ ನವದಂಪತಿ ಸೀರೆಯಿಂದ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ಮನೋಜಕುಮಾರ ಅವರ ತಾಯಿ ಭಾರತಿ ಅವರು ತಮ್ಮ ಮಗಳ ಊರಿಗೆ ಹೋಗಿದ್ದರು. ಇಂದು‌ ಬುಧವಾರ ಬೆಳಿಗ್ಗೆ ವಾಪಸ್ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಜಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Previous articleಹುಬ್ಬಳ್ಳಿ ಯುವತಿಯ ಕೊಲೆ ಪ್ರಕರಣ: ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ
Next articleಉಚಿತ ಪಡಿತರ ಮಿತಿ ಐದು ಕೆಜಿಯಿಂದ 10 ಕೆಜಿಗೆ