ಬಲಮುರಿ ಕಾವೇರಿ ನದಿಯಲ್ಲಿ ಮುಳುಗಿ ಯುವಕ ಸಾವು

0
7

ಶ್ರೀರಂಗಪಟ್ಟಣ : ತಾಲ್ಲೂಕಿನ ಬಲಮುರಿ ಪ್ರವಾಸಿ ತಾಣದ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಯುವಕನೋರ್ವ ನೀರಲ್ಲಿ‌ ಮುಳುಗಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.

ನಂಜನಗೂಡ ತಾಲ್ಲೂಕಿನ ಸಾಲುಂಡಿ ಗ್ರಾಮದ ಬೀರಪ್ಪ ಎಂಬುವರ ಮಗ ರವಿಕುಮಾರ್ (18) ಸಾವನ್ನಪ್ಪಿರುವ ಯುವಕ.

ಈತ ತನ್ನ ಸ್ನೇಹಿತರ ಜೊತೆ ಬಲಮುರಿ ಪ್ರವಾಸಿ ತಾಣಕ್ಕೆ ಬಂದಿದ್ದು, ನೀರಿನಲ್ಲಿ ಈಜಾ ಡುತ್ತಿದ್ದ ವೇಳೆ ಈ ಅವಘಢ ಸಂಭವಿಸಿದೆ.

ಈ ಸಂಬಂಧ ಕೆ.ಆರ್.ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಖೊಟ್ಟಿ ಮತದಾನಕ್ಕೆ ಮುಂದಾದ ಯುವಕ ಪೊಲೀಸ್ ವಶಕ್ಕೆ
Next articleಜನಕಲ್ಯಾಣಕ್ಕೆ ಸಂಹಿತೆ ಬಿಸಿ