ಆಂಧ್ರ ಪ್ರದೇಶ ಪ್ರವೇಶಿಸಿದ ಭಾರತ್‌ ಜೋಡೋ ಯಾತ್ರೆ

0
44
ಭಾರತ್‌ ಜೋಡೋ

ಕಾಂಗ್ರೆಸ್‌ನ ಭಾರತ್‌ ಜೋಡೋ ಯಾತ್ರೆ ಇಂದು ಬೆಳಗ್ಗೆ ಚಿತ್ರದುರ್ಗದ ರಾಂಪುರದಿಂದ ಪುನರಾರಂಭವಾಗಿ ಸಂಜೆ ಹೊತ್ತಿಗೆ ಜಾಜಿರಕಲ್ಲು ಟೋಲ್ ಪ್ಲಾಜಾದಿಂದ ಆಂಧ್ರ ಪ್ರದೇಶದ ಓಬಳಾಪುರಂನತ್ತ ಸಾಗಿತು. ಶನಿವಾರ 10 ಗಂಟೆಗೆ ಗಣಿನಾಡು ಬಳ್ಳಾರಿಗೆ ಪಾದಯಾತ್ರೆ ತಲುಪಲಿದ್ದು, ಕರ್ನಾಟಕಕ್ಕೆ ಮರಳಿದ ಬಳಿಕ ರಾಹುಲ್​​ ಗಾಂಧಿ ರಾತ್ರಿ ಬಳ್ಳಾರಿ ಜಿಲ್ಲೆಯ ಹಲಕುಂದಿ ಮಠದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅದೇ ದಿನ ಮಧ್ಯಾಹ್ನ 1 ಗಂಟೆಗೆ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಪಾದಯಾತ್ರೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿ ಹಲವು ನಾಯಕರು ರಾಹುಲ್ ಗಾಂಧಿಗೆ ಸಾಥ್ ನೀಡುತ್ತಿದ್ದಾರೆ.

Previous articleಬೆಂಗಳೂರಿಗೆ ಬಂದ ವಿಶ್ವದ ದೊಡ್ಡ ವಿಮಾನ
Next articleಪುಣ್ಯಕೋಟಿ ದತ್ತು ಯೋಜನೆಗೆ ಸರ್ಕಾರಿ ನೌಕರರ ದೇಣಿಗೆ