ಬೆಂಗಳೂರಿಗೆ ಬಂದ ವಿಶ್ವದ ದೊಡ್ಡ ವಿಮಾನ

0
14
Air Bus

ಪ್ರಪಂಚದ ಅತಿದೊಡ್ಡ ವಿಮಾನ ಏರ್‌ಬಸ್ A380 ಇಂದು ಬೆಂಗಳೂರಿನ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಗಮಿಸಿತು.
ದುಬೈನಿಂದ ಬೆಳಗ್ಗೆ 10 ಗಂಟೆಗೆ ಟೇಕಾಫ್ ಆಗಿದ್ದು, ಮಧ್ಯಾಹ್ನ 3.40ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರವೇಶಿಸಿದೆ. ಈ ದೊಡ್ಡ ವಿಮಾನ ಆಗಮಿಸುತ್ತಿದ್ದಂತೆ ಕೆಂಪೇಗೌಡ ವಿಮಾನ ನಿಲ್ದಾಣದ ಸಿಬ್ಬಂದಿ ಸಂಭ್ರಮದಿಂದ ಸ್ವಾಗತಿಸಿದರು.
ವಿಶ್ವದ ಅತಿದೊಡ್ಡ ಎಮಿರೇಟ್ಸ್‌ ವಿಮಾನಯಾನ ಕಂಪನಿಯ ಅತ್ಯಂತ ದೊಡ್ಡ ವಿಮಾನ ಇದಾಗಿದ್ದು, 500ಕ್ಕೂ ಹೆಚ್ಚು ಆಸನಗಳು ಸೇರಿ ಹಲವು ವಿಶೇಷತೆಗಳನ್ನು ಹೊಂದಿದೆ.

Previous articleಟ್ರಾಫಿಕ್ ಪೊಲೀಸ್ ಆದ ಸಚಿವರು
Next articleಆಂಧ್ರ ಪ್ರದೇಶ ಪ್ರವೇಶಿಸಿದ ಭಾರತ್‌ ಜೋಡೋ ಯಾತ್ರೆ