ಕಳ್ಳರನ್ನು ಕಟ್ಟಿಹಾಕಿ ಧರ್ಮದೇಟು

0
11

ಕುಷ್ಟಗಿ: ಬೈಕಿನಲ್ಲಿ ಬಂದ ಕಳ್ಳರಿಬ್ಬರು ದನ, ಕರು, ಕುರಿಮರಿ ಕಳ್ಳತನಕ್ಕೆ ಯತ್ನಿಸಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಘಟನೆ ತಾಲೂಕಿನ ಕಡಿವಾಲ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.
ಗ್ರಾಮದ ಹೊರ ವಲಯ ಹನುಮಂತಪ್ಪ ಖಾತರಕಿ ಎಂಬುವರು ತಮ್ಮ ತೋಟದ ಮನೆಯ ಮುಂದಿನ ಶೆಡ್ಡಿನಲ್ಲಿ ಕಟ್ಟಲಾಗಿದ್ದ ದನ, ಕರು, ಕುರಿಮರಿಗಳನ್ನು ಕದಿಯಲು ಯತ್ನಿಸಿದ್ದಾರೆ. ಎಚ್ಚರಗೊಂಡ ತೋಟದ ಮನೆಯವರು ಗ್ರಾಮಸ್ಥರನ್ನು ಕರೆಯಿಸಿ ಕಳ್ಳರನ್ನು ಹಿಡಿದು ಕಟ್ಟಿಹಾಕಿ ಧರ್ಮದೇಟು ನೀಡಿದ್ದಾರೆ.
ಬಳಿಕ ವಿಚಾರಿಸಿದಾಗ ಶಾಂತಗೇರಿ ಗ್ರಾಮದವರು ಎಂದು ಪರಿಚಯ ತಿಳಿಸಿದ್ದಾರೆ. ಸಹಾಯಕ್ಕೆ ತಂದ ಬೈಕನ್ನು ಊರಾಚೆ ಬಿಟ್ಟು ಬಂದಿರುವುದಾಗಿ ತಿಳಿಸಿದ್ದಾರೆ. ಸದ್ಯ ಇಬ್ಬರೂ ಆರೋಪಿಗಳನ್ನು ಗ್ರಾಮಸ್ಥರು ಹನುಮಸಾಗರ ಪೊಲೀಸರ ಕೈಗೆ ಒಪ್ಪಿಸಿದ್ದಾರೆ.
ಹನುಮಸಾಗರ, ಹನುಮನಾಳ ಹೋಬಳಿಗಳ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಬೆಲೆ ಬಾಳುವ ಜಾನುವಾರು, ಕುರಿ, ಮೇಕೆಗಳನ್ನು ಸಾಕಿಕೊಂಡಿರುವ ರೈತರ ನಿದ್ದೆಗೆಡಿಸಿದೆ. ಕುರಿ, ಮೇಕೆ, ದನ-ಕರು ಕದಿಮರ ಜಾಲವಿದ್ದು, ಪೊಲೀಸರು ಕಳ್ಳರ ಜಾಡುಹಿಡಿದು ಜಾಲ ಪತ್ತೆ ಹಚ್ಚಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Previous articleತಾನೇ ಹಾಕಿದ ಬಲೆಗೆ ಸಿಲುಕಿ ವ್ಯಕ್ತಿ ಸಾವು
Next articleಪಾರ್ಲಿಮೆಂಟಿನಲ್ಲಿ ನೆಪಕ್ಕೂ ಬಾಯಿ ಬಿಡದವರು ಸಂಸದರಾಗಿದ್ದೇ ವೇಸ್ಟ್