ಧಾರವಾಡ: ಪ್ರಜ್ವಲ ರೇವಣ್ಣ ದೇಶ ಬಿಟ್ಟು ಹೋಗಲು ರಾಜ್ಯ ಸರಕಾರವೇ ಕಾರಣ ಎಂದು ಅಮಿತ ಶಾ ಹೇಳಿದ್ದಾರೆ. ಆದರೆ, ಗುಜರಾತಿನಿಂದ ೧೨ ಉದ್ಯಮಿಗಳು ವಂಚನೆ ಮಾಡಿ ಓಡಿ ಹೋಗಿದ್ದಾರೆ ಅದನ್ನು ಯಾಕೆ ಮಾತನಾಡಲ್ಲ ಎಂದು ಸಚಿವ ಸಂತೋಷ ಲಾಡ್ ಸವಾಲ್ ಹಾಕಿದರು.
ಕಿತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಜ್ವಲ ವಿರುದ್ದ ದೂರು ದಾಖಲಾದ ಕೂಡಲೇ ರಾಜ್ಯ ಸರಕಾರ ಎಸ್‌ಐಟಿ ರಚಿಸಿದೆ. ಅಷ್ಟರಲ್ಲೇ ಪ್ರಜ್ವಲ ದೇಶ ಬಿಟ್ಟಿದ್ದರು. ಆದರೆ, ದೇಶಕ್ಕೆ ಮೋಸ ಮಾಡಿ ೧೨ ಜನ ಗುಜರಾತ ಉದ್ಯಮಿಗಳು ಓಡಿ ಹೋಗಿದ್ದಾರೆ. ಅವರಿಗೆ ಏನು ಮಾಡಿದ್ದೀರಿ. ಆಗ ನಿಮ್ಮ ಸರಕಾರ ಏನು ಮಾಡುತ್ತಿತ್ತು ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿ ಏನೇನು ಮಾಡಿದ್ದಾರೆ ಎಂದು ಬಹಿರಂಗ ಚರ್ಚೆಗೆ ಬರಲಿ. ನಾವು ರಾಹುಲ್ ಗಾಂಧಿ ಅವರನ್ನು ಕರೆಯಿಸುತ್ತೇವೆ. ಜೋಶಿ ಅವರು ಮೋದಿ ಅವರನ್ನು ಚರ್ಚೆಗೆ ಕರೆಯಿಸುತ್ತಾರಾ…? ಎಂದು ಪ್ರಶ್ನಿಸಿದರು