ಕಾಂಗ್ರೆಸ್‌ದು 85% ಕಮೀಷನ್ ಸರ್ಕಾರ

ಬೊಮ್ಮಾಯಿ

ಬಳ್ಳಾರಿ: ಈ ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರಗಳು ಶೇ. 85ರ ಕಮೀಷನ್ ಸರ್ಕಾರಗಳಾಗಿದ್ದವು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಕಿದ್ದಾರೆ.
ಸಿರುಗುಪ್ಪ ಪಟ್ಟಣದಲ್ಲಿ ಹಮ್ಮಿಕೊಂಡ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ರಾಜ್ಯ, ಕೇಂದ್ರದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಸರ್ಕಾರಗಳು ಶೇ. 85ರಷ್ಟು ಕಮೀಷನ್ ತಿನ್ನುವ ಸರ್ಕಾಗಳು ಆಗಿದ್ದವು ಎಂಬುದನ್ನು ನಾನು ಹೇಳಿದ್ದಲ್ಲ ಬದಲಿಗೆ ರಾಹುಲ್ ಗಾಂಧಿ ತಂದೆಯಾಗಿದ್ದ ಪೂಜ್ಯ ರಾಜೀವ್ ಗಾಂಧಿ ಅವರು ಎಂದರು.
ರಾಜೀವ್ ಗಾಂಧಿ ಪಿಎಂ ಆಗಿದ್ದಾಗ ನಾವು ಕೇಂದ್ರದಿಂದ 100 ರೂ. ಜನರಿಗೆ ಕಳುಹಿಸಿದರೆ ಅದು ಜನರ ಕೈ ಸೇರುತ್ತಲೇ 15 ರೂ. ಆಗುತ್ತದೆ. 85 ರೂ. ಕಮೀಷನ್ ರೂಪದಲ್ಲಿ ಕಾಂಗ್ರೆಸ್ ನಾಯಕರ ಜೇಬು ಸೇರುತ್ತಿತ್ತು ಎಂಬುದನ್ನು ಸ್ವತಃ ರಾಜೀವ್ ಗಾಂಧಿ ಹೇಳಿದ್ದರು. ಇಂತಹ ಪಕ್ಷದ ನಾಯಕರು ಇಂದು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅವರು ಜರೆದರು.
ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುತ್ತಲೇ ಈ ನೂರೂ ರೂಪಾಯಿ ಸಹ ಜನರ ಖಾತೆಗೆ ಸೇರುವಂತೆ ಡಿಬಿಟಿ ವ್ಯವಸ್ಥೆ ಮಾಡಿ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದರು ಎಂದರು.