ನಾಯಿ ಹೊತ್ತೊಯ್ದು ತಿಂದು ಹಾಕಿದ ಚಿರತೆ

0
20

ಮಂಡ್ಯ: ಜಿಲ್ಲೆಯ ಕನಗನಹಳ್ಳಿಯಲ್ಲಿ ನಾಯಿಯೊಂದನ್ನು ಹೊತ್ತೊಯ್ದು ಚಿರತೆ ತಿಂದು ಹಾಕಿರುವ ಘಟನೆ ವರದಿಯಾಗಿದೆ.
ಶನಿವಾರ ಮುಂಜಾನೆ 3.30ಗಂಟೆ ಸುಮಾರಿನಲ್ಲಿ ನಾಯಿಯನ್ನು ಹಿಡಿದು ಸ್ವಲ್ಪ ದೂರ ಎಳೆದೊಯ್ದು ತಿಂದು ಹಾಕಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಮೈಸೂರು-ಕೆ.ಆ‌ರ್.ಪೇಟೆ ಮುಖ್ಯ ರಸ್ತೆಯಲ್ಲಿರುವ ಅಂಗಡಿಯೊಂದರ ಮುಂದೆ ಅಳವಡಿಸಿದರುವ ಸಿಸಿ ಕ್ಯಾಮೆರಾದಿಂದ ಚಿರತೆ ಇರುವುದು ಧೃಡಪಟ್ಟಿದೆ.
ಅಲ್ಲದೆ ಶನಿವಾರ ಸಂಜೆ 6 ಗಂಟೆ ಸುಮಾರಿನಲ್ಲಿ ಜಮೀನಿನ ಬಳಿ ತೆರಳಿದ್ದ ರೈತರಿಗೆ ಚಿರತೆ ಕಾಣಿಸಿಕೊಂಡು ಜೀವಭಯ ಹುಟ್ಟಿಸಿದೆ. ಕಳೆದ ಒಂದು ತಿಂಗಳಿನಿಂದ ಗ್ರಾಮದ ಅಸುಪಾಸಿನಲ್ಲಿ ಕಾಣಿಸಿಕೊಂಡಿರುವ ಚಿರತೆ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ಕೊಡಲೇ ಬೋನು ಇರಿಸಿ ಚಿರತೆ ಹಿಡಿಯುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

Previous articleಬೀಗ ಮುರಿದು ಹಣ, ಒಡವೆ ಕದ್ದು ಖದೀಮರು ಪರಾರಿ
Next articleಮನೆಗಳ್ಳತನಕ್ಕೆ ವಿಫಲ ಯತ್ನ