ಶ್ರೀ ಕ್ಷೇತ್ರ ಶಿಬರೂರಿನಲ್ಲಿ ನಟಿ ಶಿಲ್ಪಾ ಶೆಟ್ಟಿ ಪ್ರಾರ್ಥನೆ

0
18

ಮಂಗಳೂರು: ಬ್ರಹ್ಮಕುಂಭಾಭಿಷೇಕ, ಅಷ್ಟಪವಿತ್ರ ನಾಗಮಂಡಲ ಸೇವೆ ಮತ್ತು ವಿಶೇಷ ಜಾತ್ರಾ ಮಹೋತ್ಸವ ನಡೆಯುತ್ತಿರುವ ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರಕ್ಕೆ ಶುಕ್ರವಾರ ಸಂಜೆ ಕುಟುಂಬದವರೊಂದಿಗೆ ಭೇಟಿ ನೀಡಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ನಾಗಮಂಡಲ ನಡೆಯುವ ವೇದಿಕೆಗೂ ಭೇಟಿ ನೀಡಿದ ಅವರು ಪ್ರಸಾದ ರೂಪದಲ್ಲಿ ಹಿಂಗಾರ ಪಡೆದುಕೊಂಡರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಿಲ್ಪಾ ಶೆಟ್ಟಿ, ಕೊಡಮಣಿತ್ತಾಯ ಕ್ಷೇತ್ರ ಕಾರಣಿಕ ಕ್ಷೇತ್ರವಾಗಿದೆ. ನನ್ನ ಊರಿಗೆ ಸಮೀಪ ಇದೆ. ದೈವ ದೇವರು ಸಂಕಷ್ಟ ಬಗೆ ಹರಿಸಿ ಸರ್ವರಿಗೂ ಒಳ್ಳೆಯದು ಮಾಡಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ತುಳುವಿನಲ್ಲಿ ಹೇಳಿದರು.
ಅಸ್ತಿ ಜಪ್ತಿ..
ಹಣ ಲೌಂಡರಿಂಗ್ ಪ್ರಕರಣದಲ್ಲಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾಗೆ ಸೇರಿದ ೯೮ ಕೋಟಿ ಮೌಲ್ಯದ ಆಸ್ತಿಯನ್ನು ಇತ್ತೀಚಿಗೆ ಜಫ್ತಿ ಮಾಡಿತ್ತು.
ಶಿಲ್ಪಾ ಶೆಟ್ಟಿ ಮೂಲತ: ಕಟೀಲು ಸಮೀಪದ ನಿಡ್ಡೋಡಿಯವರು. ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರಕ್ಕೆ ಅವರು ಸುಮಾರು ೭ ಲಕ್ಷ ಮೌಲ್ಯದ ಪ್ರಧಾನ ಬೆಳ್ಳಿ ಕಲಶವನ್ನು ಸಮರ್ಪಿಸಿದ್ದಾರೆ. ತಾಯಿ, ಇಬ್ಬರು ಮಕ್ಕಳೊಂದಿಗೆ ಆಗಮಿಸಿರುವ ಅವರು ಸಸಿಹಿತ್ಲುವಿನ ರೆಸಾರ್ಟ್‌ನಲ್ಲಿ ತಂಗಿದ್ದಾರೆ.

Previous articleಕಾಸರಗೋಡಿ ನಟಿ ಸನ್ನಿಲಿಯೋನ್ ಮುಗಿಬಿದ್ದ ಜನತೆ
Next articleಸಂಸದ ವಿ. ಶ್ರೀನಿವಾಸ ಪ್ರಸಾದ್ ಸ್ಥಿತಿ ಗಂಭೀರ, ಮಣಿಪಾಲ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ