ನಾಲ್ಕು ಜನರ ಬರ್ಬರ ಹತ್ಯೆ ಪ್ರಕರಣ: ಪುತ್ರನಿಂದಲೇ ಕೊಲೆಗೆ ಸುಪಾರಿ

0
15
Murder

ಗದಗ: ಜಿಲ್ಲೆಯ ಜನತೆಯ ನಿದ್ದೆಗೆಡಿಸಿದ್ದ ಗದುಗಿನ ದಾಸರಗಲ್ಲಿಯಲ್ಲಿ ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿದಂತೆ ಒಂದೇ ಕುಟುಂಬ ನಾಲ್ವರನ್ನು ಭೀಕರ ಹತ್ಯೆಗೈದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಪ್ರಕಾಶ ಬಾಕಳೆ ಹಿರಿಯ ಪುತ್ರನೇ ಮಹಾರಾಷ್ಟ್ರದ ಫಯಾಜ್ ಗ್ಯಾಂಗ್‌ಗೆ ಸುಪಾರಿ ನೀಡಿ ಹತ್ಯೆ ಮಾಡಿದ ಅಂಶ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕಾಶ ಬಾಕಳೆ ಪುತ್ರ ವಿನಾಯಕ ಬಾಕಳೆಯನ್ನು ಗದಗನಲ್ಲಿ ಹಾಗೂ ಇತರೆ ಏಳು ಜನರನ್ನು ಮಿರಜ್‌ನಲ್ಲಿ ಬಂಧಿಸಲಾಗಿದೆ. ಕುಟುಂಬದಲ್ಲಿ ಆಸ್ತಿ ಹಂಚಿಕೆ ವಿಷಯದಲ್ಲಿ ನಡೆದಿದ್ದ ಕಲಹವೇ ಈ ಕೊಲೆಗೆ ಕಾರಣ. ಪ್ರಕಾಶ ಬಾಕಳೆ ಮೊದಲ ಪತ್ನಿಯ ಹಿರಿಯ ಪುತ್ರ ವಿನಾಯಕ ಪ್ರಕಾಶ ಬಾಕಳೆ ಸುಪಾರಿ ನೀಡಿ ಇಡೀ ಕುಟುಂಬ ಹತ್ಯೆ ಮಾಡಲು ಪ್ರಯತ್ನಿಸಿರುವ ಅಘಾತಕಾರಿ ಅಂಶ ಬಯಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕಾಶ ಬಾಕಳೆ ಪುತ್ರ ವಿನಾಯಕ ಬಾಕಳೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ನಾಲ್ಕು ಜನರನ್ನು ಹತ್ಯೆಗೈದು ಪರಾರಿಯಾಗಿರುವ ಆರೋಪಿಗಳನ್ನು ಗದಗ ಫೈರೋಜ್ ಖಾಜಿ, ಜಿಶಾನ ಖಾಜಿ, ಮಿರಜ್‌ನ ಸುಪಾರಿ ಕಿಲ್ಲರ್‌ಗಳಾಗಿರುವ ಸಾಹಿಲ್ ಖಾಜಿ, ಸೋಹೇಲ್ ಖಾಜಿ, ಸುಲ್ತಾನ ಶೇಖ, ಮಹೇಶ ಸಾಳುಂಕೆ, ವಾಹೀದ ಬೇಪಾರಿ ಎಂದು ಗುರುತಿಸಲಾಗಿದೆ.

Previous articleಅಡ್ಡಾದಿಡ್ಡಿ ಕಾರು ಚಲಿಸಿ ಚಾಲಕನಿಗೆ ಗಾಯ
Next articleಗುಡಿಸಲಿಗೆ ಬೆಂಕಿ: ಅಪಾರ ಹಾನಿ