ನಮ್ಮ ಸರ್ಕಾರದಿಂದಲೇ ಮಹಾದಾಯಿ ಯೋಜನೆ ಜಾರಿ: ಕಟೀಲ್

0
15
ಮಹದಾಯಿ

ನವಲಗುಂದ: ಮಹದಾಯಿ ಯೋಜನೆ ಜಾರಿಗೆ ನಮ್ಮ ಸರ್ಕಾರವು ಬದ್ಧವಾಗಿದ್ದು, ನಮ್ಮ ಸರ್ಕಾರದಿಂದಲೇ ಅದು ಜಾರಿಯಾಗಲಿದೆ. ರೈತರಿಗೆ ಕೊಟ್ಟ ಭರವಸೆ ಉಳಿಸಿಕೊಳ್ಳುತ್ತೇವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನಕುಮಾರ ಕಟೀಲ ಹೇಳಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಇಲ್ಲಿನ ಹುತಾತ್ಮ ರೈತರ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿದ ಬಳಿಕ ಮನವಿ ಸಲ್ಲಿಸಿದ ರೈತರನ್ನುದ್ದೇಶಿಸಿ ಮಾತನಾಡಿ, ಮಹದಾಯಿ ಯೋಜನೆ ಜಾರಿ ಈ ಭಾಗಕ್ಕೆ ಎಷ್ಟು ಮಹತ್ವದ್ದು ಎಂಬುದು ಗೊತ್ತಿದೆ. ದೆಹಲಿ ಮಟ್ಟದಲ್ಲಿ ಎಲ್ಲ ಪ್ರಯತ್ನ ನಡೆದಿವೆ. ಕಾನೂನಾತ್ಮಕ ಅಡಚಣೆಗಳಿರಲಿ, ಏನೇ ಇರಲಿ. ಅವುಗಳೆಲ್ಲವನ್ನೂ ಆದಷ್ಟು ಬೇಗ ಪರಿಹರಿಸಿಕೊಂಡು ಈ ಯೋಜನೆ ಜಾರಿ ಮಾಡುತ್ತೇವೆ. ನಮ್ಮ ಬದ್ಧತೆಯ ಬಗ್ಗೆ ರೈತರು ನಂಬಿಕೆ ಕಳೆದುಕೊಳ್ಳಬಾರದು. ರೈತರೊಂದಿಗೆ ನಮ್ಮ ಪಕ್ಷ ಯಾವಾಗಲೂ ಇದೆ ಎಂದರು.

Previous articleಮೀಸಲಾತಿ ಹೆಚ್ಚಳ, ಒಂದು ಹಂತ ಮಾತ್ರ ಪೂರ್ಣ: ಸತೀಶ್ ಜಾರಕಿಹೊಳಿ
Next articleಮಂಗಳೂರು ಪಾಲಿಕೆ ಚರಾಸ್ತಿ ಜಪ್ತಿಗೆ ಆದೇಶ