ರಾಜ್ಯದ ಜನತೆಗೆ ಕ್ಷಮೆ‌ ಕೇಳಿದ ತಾಯಿ

0
21

ಧಾರವಾಡ: ಫಯಾಜ್ ಮಾಡಿರುವ ಕೃತ್ಯ ಹೇಯವಾದುದು.‌ಇದಕ್ಕೆ ರಾಜ್ಯದ ಜನತೆಗೆ ಮತ್ತು ನೇಹಾ ಕುಟುಂಬಕ್ಕೆ ಫಯಾಜ್ ತಾಯಿ ಮಮ್ತಾಜ್ ಕ್ಷಮೆ ಕೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಮಗ ಮಾತ್ರವಲ್ಲ ಯಾರೇ ಈ ರೀತಿಯ ಕೃತ್ಯ ಮಾಡಿದರೂ ಅದು ತಪ್ಪೇ. ಈ ನೆಲದ ಕಾನೂನು ಅವನಿಗೆ ಏನು ಶಿಕ್ಷೆ ಕೊಡುತ್ತದೆ ಅದಕ್ಕೆ ನಾನು ತಲೆ ಬಾಗುತ್ತೇನೆ ಎಂದರು.
ನೇಹಾ ನನ್ನ ಮಗಳು ಇದ್ದಂತೆ. ಒಂದು ವರ್ಷದ ಹಿಂದೆ ಫಯಾಜ್ ಯುನಿವರ್ಸಿಟಿ ಬ್ಲ್ಯೂ ಆದಾಗ ನೇಹಾ ಸ್ವತಃ ಆತನಿಗೆ ಪ್ರಪೋಸ್ ಮಾಡಿದ್ದಳು. ಅದನ್ನು ನನ್ನ ಮುಂದೆ ಹೇಳಿಕೊಂಡಿದ್ದನು. ಆದರೆ ಅದಕ್ಕೆ ನಾನು ವಿರೋಧಿಸಿದ್ದೆ. ಈಗ ಇಂತಹ ಕೃತ್ಯ ಮಾಡುತ್ತಾನೆ ಅಂದುಕೊಂಡಿರಲಿಲ್ಲ. ನಾನೂ ಶಿಕ್ಷಕಿಯಾಗಿದ್ದು ನೂರಾರು ಮಕ್ಕಳಿಗೆ ಶಿಕ್ಷಣ ಕೊಡುತ್ತೇನೆ. ಆದರೆ ಇವನಿಗೆ ತಕ್ಕ ಶಿಕ್ಷೆ ‌ಆಗಬೇಕು ಎಂದು ಆಗ್ರಹಿಸಿದರು.

Previous articleಇಂದು ರಾಜ್ಯಕ್ಕೆ ಮೋದಿ
Next articleತಂಪೆರೆದ ಮಳೆರಾಯ: ಏ.22 ರವರೆಗೂ ಮಳೆ‌ಯಾಗುವ ಮುನ್ಸೂಚನೆ