ಮಾಜಿ ಶಾಸಕ ಬೊಮ್ಮಣ್ಣ ಇನ್ನಿಲ್ಲ

0
19
bommanna

ಕೂಡ್ಲಿಗಿ: ತಾಲೂಕಿನ ನರಸಿಂಹಗಿರಿಯ ಮಾಜಿ ಶಾಸಕ ಎನ್.ಟಿ. ಬೊಮ್ಮಣ್ಣ(೭೮) ತುಮಕೂರಿನ ಸಿದ್ಧಗಂಗೆಯ ಆಸ್ಪತ್ರೆಯಲ್ಲಿ ಬುಧವಾರ ಮಧ್ಯಾಹ್ನ ಕೊನೆಯುಸಿರೆಳೆದರು. ೧೯೪೪ರಲ್ಲಿ ಜನಿಸಿದ ಇವರ ತಂದೆ ತಮ್ಮಣ್ಣ, ತಾಯಿ ಬೊರಮ್ಮನವರು. ತಾಲೂಕು ಅಭಿವೃದ್ಧಿ ಮಂಡಳಿಯ ಅಧ್ಯಕ್ಷನಾಗಿ ರಾಜಕೀಯಕ್ಕೆ ಪದಾರ್ಪಣೆ ಮಾಡಿ, ಕಾಂಗ್ರೆಸ್ ಪಕ್ಷದಿಂದ ೧೯೮೫-೮೯, ೧೯೮೯-೯೪ರ ಅವಧಿಯಲ್ಲಿ ೨ ಬಾರಿ ವಿಧಾನಸಭಾ ಸದಸ್ಯರಾಗಿದ್ದರು.
೧೯೯೯ರಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡರು. ನಂತರ ಪಕ್ಷೇತರ ಅಭ್ಯಾರ್ಥಿಯಾಗಿ ಕಣಕ್ಕಿಳಿದಿದ್ದರೂ, ನಂತರ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡು ಈ ಪಕ್ಷದ ಅಭ್ಯರ್ಥಿಯಾಗಿ ಪರಾಭವಗೊಂಡರು. ರಾಜಕೀಯ ಲೆಕ್ಕಾಚಾರ ಹೇಗೆ ಇರಲಿ ಇಂದಿಗೂ ಅವರಿಗೆ ಪಕ್ಷಾತೀತವಾಗಿ ಎಲ್ಲರೂ ಗೌರವದಿಂದ ಕಾಣುತ್ತಿದ್ದರು. ಇವರಿಗೆ ಮೂವರು ಪುತ್ರಿಯರು, ಇಬ್ಬರು ಪುತ್ರರಲ್ಲಿ ಡಾ. ಶ್ರೀನಿವಾಸ, ನೇತ್ರ ತಜ್ಞರಾಗಿದ್ದಾರೆ.

Previous articleಡಾ. ಕೋರೆ ಅಮೃತ ಮಹೋತ್ಸವಕ್ಕೆ ಲಕ್ಷ ಜನ
Next articleಆರ್‌ಎಸ್‌ಎಸ್ ಮುಖಂಡರ ಮೇಲೆ ಹಲ್ಲೆ: ರಟ್ಟಿಹಳ್ಳಿಯಲ್ಲಿ ಬಿಗುವಿನ ವಾತಾವರಣ