ಬೆಂಗಳೂರು: ಮಹೇಶ್ ವಿಕ್ರಮ್ ಹೆಗ್ಡೆಯವರ ಪರ ನಾವಿದ್ದೇವೆ ನಮ್ಮ ಪಕ್ಷ ಸದಾ ಕಾಲ ಬೆಂಬಲವಾಗಿ ನಿಲ್ಲಲಿದೆ ಎಂದು ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಅಧಿಕಾರ ಕೈಯಲ್ಲಿದೆ ಎಂಬ ಮಾತ್ರಕ್ಕೆ ಈ ಮಟ್ಟಕ್ಕೆ ಇಳಿದು ನಮ್ಮ ಕಾರ್ಯಕರ್ತರನ್ನು ತುಳಿಯುವ ದುಸ್ಸಾಹಸಕ್ಕೆ ಕೈ ಹಾಕಬೇಡಿ. ಸಮಾಜ ಕೈಕಟ್ಟಿ ಕೂತಿಲ್ಲ ಮತ್ತು ಕಣ್ಣು ಮುಚ್ಚಿಯೂ ಕೂತಿಲ್ಲ.
ಹಿಂದೂ ಮುಖಂಡ ಮಹೇಶ ಹೆಗಡೆರವರ ಬಂಧನಕ್ಕೆ ಷಡ್ಯಂತ್ರ ರೂಪಿಸಿದ ನಿಮ್ಮ ಸರಕಾರದ ಪೊಳ್ಳು ಬೆದರಿಕೆಗಳಿಗೆ ಹಿಂಜರಿಯುವ ಕಾರ್ಯಕರ್ತರಲ್ಲ ನಮ್ಮವರು. ಮಹೇಶ್ ವಿಕ್ರಮ್ ಹೆಗ್ಡೆಯವರ ಪರ ನಾವಿದ್ದೇವೆ ನಮ್ಮ ಪಕ್ಷ ಸದಾ ಕಾಲ ಬೆಂಬಲವಾಗಿ ನಿಲ್ಲಲಿದೆ.
ಯಾವುದೇ ಕಾರ್ಯಕರ್ತರು ಧೃತಿಗೆಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.