ಮಂಗಳೂರಿನಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್‌ ಶೋ

0
38

ಮಂಗಳೂರು: ಲೋಕಸಭೆ ಚುನಾವಣಾ ಪ್ರಚಾರಕ್ಕೆಂದು ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಮಂಗಳೂರಿನಲ್ಲಿ ರೋಡ್​ ಶೋ ನಡೆಸಿದರು. ವಿವಿಧ ಭಾಗಗಳಿಂದ ರೋಡ್ ಶೋಗೆ ಮೋದಿ ಅಭಿಮಾನಿಗಳು ಬಂದಿದ್ದರು. ಪ್ರಧಾನಿಯವರನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬಂದಿತ್ತು. ಎರಡು ಕಿಲೋಮೀಟರ್ ರಸ್ತೆಯ ಎರಡು ಬದಿಯಲ್ಲಿಯೂ ಕಿಕ್ಕಿರಿದ ಅಭಿಮಾನಿಗಳು ಮೋದಿಗೆ ಜೈಕಾರ ಹಾಕಿದರು. ಮೋದಿ ಮುಖವಾಡ, ಧ್ವಜ, ಕೇಸರಿ ಟೋಪಿ ಧರಿಸಿಕೊಂಡು ಘೋಷಣೆ ಕೂಗಿದರು.

Previous articleಎಲ್ಲಿವರೆಗೆ ಮೋದಿ ಇರುತ್ತಾರೋ? ಅಲ್ಲಿವರೆಗೂ ಅದು ಸಾಧ್ಯವಿಲ್ಲ
Next articleಪಾದಚಾರಿಗಳ ಮೇಲೆ ಮೊಗಚಿ ಬಿದ್ದ ಟಿಪ್ಪರ್: ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವು