ಚೆನ್ನೈ: ತಮಿಳುನಾಡಿನಲ್ಲಿ ಮೊದಲ ಹಂತದಲ್ಲಿ ನಡೆಯುವ ಲೋಕಸಭಾ ಚುನಾವಣೆ ನಿಮಿತ್ತ ಭದ್ರತೆಗೆ ನಿಯೋಜನೆಗೊಂಡಿದ್ದ ಕರ್ನಾಟಕದ ಪೊಲೀಸ್ ಅಧಿಕಾರಿ ಅಪಘಾತದಲ್ಲಿ ಮೃತಪಟ್ಟಿರುವ ಧಾರುಣ ಘಟನೆ ಗುರುವಾರ ನಡೆದಿದೆ.
ಲೋಕಸಭಾ ಚುನಾವಣಾ ಕರ್ತವ್ಯದ ನಿಮಿತ್ತ ನೆರೆಯ ತಮಿಳುನಾಡಿಗೆ ತೆರಳಿದ್ದ ವೇಳೆ ತಿರುವಣ್ಣಾ ಮಲೈ ಬಳಿ ರಸ್ತೆ ಅಪಘಾತವಾಗಿ ತಿಕೋಟಾ ತಾಲ್ಲೂಕಿನ ಇಬ್ಬರು ಪೊಲೀಸರು ಸೇರಿದಂತೆ ಮೂವರು ಅಸುನೀಗಿರುವ ಘಟನೆ ನಡೆದಿದೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಪೋಸ್ಟ್ ಮಾಡಿದ್ದು ನಿನ್ನೆ ಸಂಜೆ ತಮಿಳುನಾಡಿನಲ್ಲಿ ನಡೆದ ಅಪಘಾತದಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ನಮ್ಮ ಕರ್ನಾಟಕ ಕಾಪ್ಸ್ ನ ಇಬ್ಬರು ಪೊಲೀಸ್ ಅಧಿಕಾರಿಗಳು ಹಾಗೂ ತಮಿಳುನಾಡಿನ ಒಬ್ಬರು ಪೊಲೀಸರು ಹುತಾತ್ಮರಾಗಿದ್ದು, ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದಿದ್ದಾರೆ.