ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಬೆಂಬಲ ಹಾಗೂ ಮಂಡ್ಯದಿಂದ ಸ್ಪರ್ಧೆ ವಿಚಾರ ಸಂಬಂಧ ಸಮಲತಾ ಅಂಬರೀಶ್ ಮಂಡ್ಯದಲ್ಲಿಯೇ ಅಂತಿಮ ತೀರ್ಮಾನ ಪ್ರಕಟಿಸುವದಾಗಿ ತಿಳಿಸಿದ್ದಾರೆ.
ನಗರದಲ್ಲಿ ಇಂದು ಅಭಿಮಾನಿಗಳ ಸಭೆ ನಡೆಸಿ ಮಾತನಾಡಿರುವ ಅವರು 30 ವರ್ಷಗಳ ಕಾಲ ಅಂಬರೀಶ್ ಅವರೊಂದಿಗೆ ಇರುವ ಮುಖಂಡರೆಲ್ಲಾ ಇಂದಿನವರಿಗೂ ಬೆಂಬಲ ಸೂಚಿಸಿ, ಶಕ್ತಿಯನ್ನು ತುಂಬಿದ್ದಾರೆ, ನಿಂತರು, ಗೆದ್ದರು, ಸೋತರು ನನಗೆ ಮಂಡ್ಯ ಎಲ್ಲವೂ, ಮಂಡ್ಯ ಕೇವಲ ರಾಜಕೀಯ ಕ್ಷೇತ್ರ ಅಲ್ಲ, ಇದು ಭಾವನೆಯ ಸ್ಥಳವಾಗಿದೆ, ಇನ್ನು ಕೆಲವೆ ದಿನಗಳಲ್ಲಿ ಮಂಡ್ಯದಲ್ಲಿಯೇ ನನ್ನ ನಿರ್ದಾರ ತಿಳಿಸುವೆ ಎಂದಿದ್ದಾರೆ, ಬರುವ ಎಪ್ರಿಲ್ 3 ರಂದು ನನ್ನ ನಿರ್ದಾರ ತಿಳಿಸುವೇ ಎಂದಾಗ ಕೆಲಕಾಲ ಅಭೀಮಾನಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

























