ಜೋಶಿ ವಿರುದ್ಧ ದಿಂಗಾಲೇಶ್ವರ ಶ್ರೀ ಗರಂ

0
14

ಕ್ಷೇತ್ರ ಬದಲಾವಣೆ ಮಾಡುವಂತೆ ಖಡಕ್ ಎಚ್ಚರಿಕೆ.

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿರುದ್ಧ ಫಕೀರ ದಿಂಗಾಲೇಶ್ವರ ಶ್ರೀ ಸಿಡಿದೆದ್ದಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿರುದ್ಧ ತೀವೃ ಹರಿ ಹಾಯ್ದರು.

ಮಠಾಧೀಶರ ಚಿಂತನ ಮಂಥನ ಸಭೆ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಹ್ಲಾದ ಜೋಶಿಗೆ ಅವರಿಗೆ ಅಧಿಕಾರ ಮತ್ತು ಹಣದ ಮದ ಬಂದಿದೆ. ವೀರಶೈವ ಲಿಂಗಾಯತ ಸಮುದಾಯವನ್ನು ಚುನಾವಣೆ ವೇಳೆಯಲ್ಲಿ ಮಾತ್ರ ನೆನಪಿಸಿಕೊಳ್ಳುವ ಅವರು, ಉಳಿದ ಸಮಯದಲ್ಲಿ ಸಮಾಜದ ಮಠಾಧೀಶ ಮತ್ತು ಜನರನ್ನು ನಗಣ್ಯ ಮಾಡುತ್ತಾರೆ ಎಂದು ಕಿಡಿ ಕಾರಿದರು.

ಸಮುದಾಯಕ್ಕೆ ಅನ್ಯಾಯ ಮಾಡುವ ಮೂಲಕ ಏಕ ಸ್ವಾಮ್ಯತ್ವವನ್ನ ಸಾಧಿಸುತ್ತಿರುವ ಜೋಶಿ ಅವರ ಕ್ಷೇತ್ರವನ್ನು ಇದೇ ಮಾರ್ಚ್ 31 ರೊಳಗೆ ಬದಲಾವಣೆ ಮಾಡಬೇಕು. ಧಾರವಾಡ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿಯನ್ನ ಹಾಕಬೇಕು. ಇಲ್ಲದಿದ್ದರೆ ಏ.2ರಂದು ನಮ್ಮ ಅಂತಿಮ ನಿರ್ಧಾರ ಪ್ರಕಟಿಸುವುದಾಗು ಶ್ರೀಗಳು ಬಜೆಪಿ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದ್ದಾರೆ.

Previous articleಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ನೀಡಿದರೆ ರಾಜೀನಾಮೆ
Next articleಐಐಟಿ ಮದ್ರಾಸ್ ಪದವೀಧರ ಪವನ್ ಮೈಕ್ರೋಸಾಫ್ಟ್ ವಿಂಡೋಸ್ ಮುಖ್ಯಸ್ಥರಾಗಿ ನೇಮಕ