ನವಜಾತ ಶಿಶುವಿನ ಶವ ಸಾರ್ವಜನಿಕ ಶೌಚಾಲಯದಲ್ಲಿ ಪತ್ತೆ

0
31

ಗದಗ: ಸಾರ್ವಜನಿಕ ಶೌಚಾಲಯದಲ್ಲಿ ಹೆಣ್ಣು ನವಜಾತ ಶಿಶುವಿನ ಶವ ಪತ್ತೆಯಾದ ಘಟನೆ ನಡೆದಿದೆ.
ಗದಗದ ಬೆಟಗೇರಿಯ ಹುಯಿಲಗೋಳ ರಸ್ತೆಯ ವೆಂಕಟೇಶ್ವರ ಕಲ್ಯಾಣ ಮಂಟಪ ಬಳಿ ಇರುವ ಸಾರ್ವಜನಿಕ ಶೌಚಾಲಯದಲ್ಲಿ ಈ ಘಟನೆ ನಡೆದಿದ್ದು, ಬುಧವಾರ ರಾತ್ರಿ ಹೆರಿಗೆ ಆದ ಮೇಲೆ ಶೌಚಾಲಯದಲ್ಲೇ ಮಾಂಸದ ಮುದ್ದೆ ಸಮೇತ ನವಜಾತ ಶಿಶುವನ್ನು ಬಿಟ್ಟು ಹೋಗಿದ್ದರಿಂದ ನವಜಾತ ಶಿಶುವಿನ ದೇಹದ ತುಂಬೆಲ್ಲ ಇರುವೆಗಳು ಮೆತ್ತಿಕೊಂಡು ಮೃತ ಸ್ಥಿತಿಯಲ್ಲಿ ಶಿಶು ಪತ್ತೆಯಾಗಿದೆ. ಗುರುವಾರ ಬೆಳಗ್ಗೆ ಸಾರ್ವಜನಿಕರು ಬಂದು ನೋಡಿದಾಗ ಕೃತ್ಯ ಬಯಲಾಗಿದೆ. ನವಜಾತ ಶಿಶುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದು, ಗದಗದ ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿದಿದೆ.

Previous articleಸದಾನಂದ ಗೌಡರ ತುರ್ತು ಪತ್ರಿಕಾಗೋಷ್ಠಿ: ಬಿಜೆಪಿ ಪಕ್ಷ ಶುದ್ದೀಕರಣ ಮಾಡುವತ್ತ ಗಮನ
Next articleಕನ್ನಡಿಗರ ಮೇಲಿನ ಅಭಿಮಾನ ಮೆರೆಯಿರಿ: ಇಲ್ಲವೇ, ʼಕೈʼಲಾಗಲ್ಲವೆಂದು ಅಧಿಕಾರ ಬಿಟ್ಟು ತೊಲಗಿ