ನನ್ನನ್ನು ಸೋಲಿಸಿದರೆ ರಕ್ತಪಾತ

0
28

ವಾಷಿಂಗ್ಟನ್: ನವೆಂಬರ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮನ್ನು ಅಮೆರಿಕನ್ನರು ಚುನಾಯಿಸದಿದ್ದರೆ ರಕ್ತಪಾತವೇ ನಡೆದೀತು ಎಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಚೀನಿಯರು ಮೆಕ್ಸಿಕೋದಲ್ಲಿ ಕಾರುಗಳನ್ನು ತಯಾರಿಸಿ ಅಮೆರಿಕದಲ್ಲಿ ಮಾರಾಟ ಮಾಡುವ ಯೋಜನೆ ಹಾಕಿದ್ದಾರೆ. ಆದರೆ ನನ್ನನ್ನು ಆಯ್ಕೆ ಮಾಡಿದರೆ ಅಂತಹ ಕಾರುಗಳ ಮಾರಾಟ ಮಾಡಲು ಬಿಡುವುದಿಲ್ಲ. ಒಂದು ವೇಳೆ ನಾನು ಚುನಾಯಿತನಾಗದಿದ್ದರೆ ಇಡೀ ದೇಶವೇ ರಕ್ತದಲ್ಲಿ ಸ್ನಾನ ಮಾಡಬೇಕಾಗುತ್ತದೆ. ಆದರೆ ಅದು ಕನಿಷ್ಠ ಪ್ರಮಾಣದಲ್ಲಿರುತ್ತದೆ ಎಂದವರು ಒಹಿಯೋದ ವಂಡಾಲಿಯಾದಲ್ಲಿ ನಡೆಸಿದ ರ‍್ಯಾಲಿಯಲ್ಲಿ ಹೇಳಿದ್ದಾರೆ. ಇದೇ ಸಮಯದಲ್ಲಿ ಜೋ ಬೈಡನ್ ಅತ್ಯಂತ ಕೆಟ್ಟ ಅಧ್ಯಕ್ಷ ಎಂದೂ ಹೀಯಾಳಿಸಿದ್ದಾರೆ.
ವಿಧ್ವಂಸಕತೆ ಹಾಗೂ ಹಿಂಸಾಚಾರ ಮೇಲೆ ತಮಗಿರುವ ಪ್ರೀತಿ, ಸೇಡು ತೀರಿಸುವ ಬಯಕೆಯನ್ನು ಅಮೆರಿಕನ್ನರು ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಮತ್ತೊಮ್ಮೆ ತಮ್ಮನ್ನು ಸೋಲಿಸಲು ಮುಂದಾಗಿದ್ದಾರೆ. ಆದರೆ ೨೦೨೦ರ ಜನವರಿ ೬ರಂದು ಅಮೆರಿಕ ರಾಜಧಾನಿ ಮೇಲೆ ನಡೆದಿದ್ದ ದಾಳಿ ಪುನರಾವರ್ತನೆಯಾಗಬೇಕೆಂದು ಅಪೇಕ್ಷಿಸುತ್ತೇನೆ ಎಂದಿದ್ದಾರೆ.
ಟ್ರಂಪ್ ಈ ಹೇಳಿಕೆ ನೀಡಿದ ತುಸು ಸಮಯದ ನಂತರ ವಾಷಿಂಗ್ಟನ್‌ನಲ್ಲಿ ನಡೆದ ಭೋಜನಕೂಟ ಸಭೆಯಲ್ಲಿ, ಇತಿಹಾಸದಲ್ಲಿ ಅಭೂತಪೂರ್ವ ಕ್ಷಣ ಎದುರಾಗಲಿದೆ ಎಂದು ಬೈಡನ್ ಕೂಡಾ ಎಚ್ಚರಿಕೆ ನೀಡಿದರು. ಸ್ವಾತಂತ್ರö್ಯ ಈಗ ದಾಳಿಗೊಳಗಾಗಿದೆ. ಅದು ೨೦೨೦ರ ಚುನಾವಣೆಯಿಂದಲೇ ಆರಂಭವಾಗಿದೆ. ಚುನಾವಣಾ ಫಲಿತಾಂಶ ತಿರುಚಲು ಜನವರಿ ೬ರ ದಂಗೆಯ ಪುನರಾವರ್ತನೆಯಾಗಬೇಕೆಂದು ಅಪೇಕ್ಷಿಸುವುದೆಂದರೆ ಅದು ಅಮೆರಿಕದಲ್ಲಿ ಅಂತ:ಕಲಹ ಉಂಟಾದ ನಂತರ ನಮ್ಮ ಪ್ರಜಾತಂತ್ರಕ್ಕೆ ಎದುರಾಗುವ ಮತ್ತೊಂದು ಬೆದರಿಕೆಯೇ ಸರಿ ಎಂದು ಬೈಡನ್ ಅಭಿಪ್ರಾಯಪಟ್ಟರು. ೨೦೨೦ರಲ್ಲಿ ಅವರು ವಿಫಲವಾದರೂ ಆ ಬೆದರಿಕೆ ಮುಂದುವರಿದಿದೆ ಎಂದೂ ಹೇಳಿದರು.

Previous articleಗ್ರಾಹಕರಿಗೆ ಮಾನಸಿಕ ಕಿರುಕುಳ ಫ್ಲಿಪ್‌ಕಾರ್ಟ್‌ಗೆ ೧೦ ಸಾವಿರ ದಂಡ
Next articleಬಘೇಲ್ ಕೊರಳಿಗೆ ಬೆಟ್ಟಿಂಗ್ ಉರುಳು