ಮಮತಾ ಬ್ಯಾನರ್ಜಿ ಗಂಭೀರ ಗಾಯ: ಆಸ್ಪತ್ರೆಗೆ ದಾಖಲು

0
8

ಕೊಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ.
ಕಾಲಿಘಾಟ್ ಮನೆಯ ಆವರಣದಲ್ಲಿ ನಡೆದಾಡುತ್ತಿರುವ ವೇಳೆ ಆಯ ತಪ್ಪಿ ಬಿದ್ದು ಗಾಯವಾಗಿದೆ. ಬಿದ್ದ ರಭಸಕ್ಕೆ ಮಮತಾ ಹಣೆಗೆ ಗಂಭೀರವಾದ ಗಾಯವಾಗಿದೆ. ಗಾಯದ ಪ್ರಮಾಣ ಹೆಚ್ಚಾಗಿರುವ ಕಾರಣ ಹಣೆಗೆ ಸ್ಟಿಚ್ ಮಾಡಲಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ರಕ್ತ ಸ್ರಾವವಾಗಿರುವ ಕಾರಣ ಮಮತಾ ಬ್ಯಾನರ್ಜಿ ಆಸ್ವಸ್ಥಗೊಂಡಿದ್ದಾರೆ. ಆದರೆ ಯಾರೂ ಆತಂಕ ಪಡುವು ಅಗತ್ಯವಿಲ್ಲ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

Previous articleವಾಕರಸಾ ಸಂಸ್ಥೆಗೆ ೭೯೯ ಬಸ್ ಸೇರ್ಪಡೆ
Next articleರೈಲು ಹಳಿ ಛಿದ್ರ, ನೆಲಕ್ಕುರುಳಿದ ಗೂಡ್ಸ್