ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಎಮ್ಮೆಗಳಿಗೆ ಡಿಕ್ಕಿ: ಇಂಜಿನ್‌ಗೆ ಹಾನಿ

0
30
ವಂದೇ ಭಾರತ್‌ ಎಕ್ಸ್‌ಪ್ರೆಸ್‌

ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಜಾನುವಾರುಗಳು ಅಡ್ಡ ಬಂದ ಪರಿಣಾಮ ರೈಲು ಡಿಕ್ಕಿ ಹೊಡೆದಿದ್ದು, ರೈಲಿನ ಇಂಜಿನ್‌ಗೆ ಹಾನಿಯಾದ ಘಟನೆ ಗುಜರಾತ್‌ನ ವತ್ವಾ ರೈಲು ನಿಲ್ದಾಣದ ಬಳಿ ನಡೆದಿದೆ. ಘಟನೆಯಲ್ಲಿ ನಾಲ್ಕು ಎಮ್ಮೆಗಳು ಸಾವನ್ನಪ್ಪಿವೆ. ರೈಲು ಇಂಜಿನ್‌ನ ಮುಂಭಾಗಕ್ಕೆ ಹಾನಿಯಾಗಿದ್ದು, ಮುಂಭಾಗದ ಭಾಗವನ್ನು ತೆರವುಗೊಳಿಸಿ ನಂತರ ರೈಲು ಪ್ರಯಾಣ ಮುಂದುವರಿಸಲಾಗಿದೆ.
ಗಾಂಧಿನಗರ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿನಗರ-ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಸೆಪ್ಟಂಬರ್‌ 29ರಂದು ಚಾಲನೆ ನೀಡಿದ್ದರು.

Previous articleರಾಹುಲ್ ಗಾಂಧಿ ಪತ್ರಕ್ಕೆ ಸ್ಪಂದಿಸಿದ ಸಿಎಂ ಬೊಮ್ಮಾಯಿ
Next articleಡಿಕೆ ಸಹೋದರರಿಗೆ ಮತ್ತೆ ಇಡಿ ನೋಟಿಸ್‌