2 ದಿನಗಳಲ್ಲಿ ಸಾಯುತ್ತೇನೆ! ಇದು ನನ್ನ ಕೊನೆಯ ವಿಡಿಯೋ! ಎಂದ ನಟಿ

0
19

ನಾನು ನಿಮ್ಮ ಹೆಂಡತಿ, ನಾನು ನಿಮ್ಮ ಮನಸ್ಸಿನಲ್ಲಿದ್ದೇನೆ. ನೀನಿಲ್ಲದೆ ನಾನು ಬದುಕಲಾರೆ’

ಚೆನೈ: ಇನ್ನೆರಡು ದಿನಗಳಲ್ಲಿ ನಾನು ಸಾಯಲಿದ್ದೇನೆ. ಇದೇ ನನ್ನ ಕೊನೆಯ ವಿಡಿಯೋ ಎಂದು ನಟಿ ವಿಜಯಲಕ್ಷ್ಮಿ ಸಂಚಲನ ಮೂಡಿಸಿದ್ದಾರೆ.
ಕಳೆದ ತಿಂಗಳ ಕೊನೆಯಲ್ಲಿ ಟೆರೇಸ್ ಮೇಲೆ ನಿಂತು, ಸೀಮಾನ್ ಅಂಕಲ್, ನಾನು ನಿಮ್ಮ ಪ್ರೇಮಿ ಅಲ್ಲ, ನಾನು ನಿಮ್ಮ ಹೆಂಡತಿ, ನಾನು ನಿಮ್ಮ ಮನಸ್ಸಿನಲ್ಲಿದ್ದೇನೆ. ನೀನಿಲ್ಲದೆ ನಾನು ಬದುಕಲಾರೆ’ ಎಂದು ವಿಜಯಲಕ್ಷ್ಮಿ ವಿಡಿಯೋ ಪೋಸ್ಟ್ ಮಾಡಿದ್ದರು. ನಟಿ ವಿಜಯಲಕ್ಷ್ಮಿ ನಿನ್ನೆ ವಿಡಿಯೋ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಅವರು ಹೇಳಿದ್ದು: 2008ರಲ್ಲಿ ಅಕ್ಕನ ಸಮಸ್ಯೆಗೆ ಸೀಮಾನ್ ಬಳಿ ಹೋಗಿದ್ದೆವು. ಆಗ ಸೀಮಾನ್ ಮದುವೆಯಾಗಿರಲಿಲ್ಲ. ಅವನು ನನ್ನನ್ನು ಮದುವೆಯಾಗಿ 3 ವರ್ಷ ಸಂಸಾರ ಮಾಡಿ ನನ್ನ ಜೀವನವನ್ನು ಹಾಳು ಮಾಡಿದನು. ಆ ಬಳಿಕ ತನಗೆ ಸಮಸ್ಯೆ ಇದೆ ಎಂದು ಹೇಳಿ ನನ್ನನ್ನು ಮಧ್ಯದಲ್ಲಿ ಬಿಟ್ಟು ಹೋಗಿದ್ದಾರೆ. ನನ್ನನ್ನು ಬದುಕಲು ಬಿಡದೆ ವ್ಯಭಿಚಾರಿ ಎಂದು ಹೆಸರಿಸಿ ತಮಿಳುನಾಡಿನಲ್ಲಿ ನನ್ನನ್ನು ಕೊಳಕು ಮಾಡಿದ್ದಾರೆ ಎಂದಿದ್ದಾರೆ, ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಇನ್ನು ನಾಮ್ ತಮಿಳರ್ ಪಕ್ಷದ ಸಂಯೋಜಕ ಸೀಮಾನ್ ಸಲ್ಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ವಿಜಯಲಕ್ಷ್ಮಿ ಅವರಿಗೆ ಇದೇ 19ರಂದು ಹಾಜರಾಗುವಂತೆ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ.

Previous articleಭಾರತದ ಮೊದಲ ಅಂಡರ್ ವಾಟರ್ ಮೆಟ್ರೋ ಸೇವೆಗೆ ಮೋದಿ ಚಾಲನೆ
Next articleಹುಬ್ಬಳ್ಳಿಯಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರ