`ಆಕಾಶದ ಗುಡ್ಡಕ್ಕೆ ಶಿಶು ಏರಿತಲೆ ಪರಾಕ್’

0
30
ಕಾರ್ಣಿಕ

ರಾಣೇಬೆನ್ನೂರು: ತಾಲೂಕಿನ ಸುಕ್ಷೇತ್ರ ದೇವರಗುಡ್ಡದ ಶ್ರೀ ಮಾಲತೇಶಸ್ವಾಮಿ ಸನ್ನಿಧಿಯಲ್ಲಿ ಮಂಗಳವಾರ ಮಹಾನವಮಿಯಂದು ಸಂಜೆ 6ಕ್ಕೆ ಜರುಗಿದ ಕಾರ್ಣಿಕೋತ್ಸವದಲ್ಲಿ `ಆಕಾಶದ ಗುಡ್ಡಕ್ಕೆ ಶಿಶು ಏರಿತಲೆ ಪರಾಕ್’ ಎಂದು 21ಅಡಿ ಬಿಲ್ಲನೇರಿ ಗೊರವಯ್ಯ ನಾಗಪ್ಪ ದುರ್ಗಪ್ಪ ಉರ್ಮಿ ಕಾರ್ಣಿಕ ನುಡಿದರು.
ಗೊರವಪ್ಪನ ದೇಹ ಯಾವ ಕಡೆ ಬೀಳುತ್ತೆ, ತಲೆ ಯಾವ ಕಡೆ ಬೀಳುತ್ತೆ ಎಂದು ನೋಡಲಾಗುತ್ತಿದೆ. ಆ ಕಡೆ ಒಳ್ಳೆಯ ಬೆಳೆ ಮಳೆಯಾಗುತ್ತೆ ಎಂದು ಭಕ್ತರು ನಂಬುತ್ತಾರೆ. ಕಾರ್ಣಿಕವಾಗುತ್ತಿದ್ದಂತೆ ಭಕ್ತರು ಪ್ರಸ್ತುತ ಕಾರ್ಣಿಕದ ಅರ್ಥವನ್ನು ವಿಶ್ಲೇಷಿಸಿದರು. ಈ ಸಲದ ಕಾರ್ಣಿಕ ಕುರಿತು ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷಭಟ್ ಗುರೂಜಿ ವ್ಯಕ್ತಪಡಿಸಿದ ವಿಶ್ಲೇಷಣೆ ಪ್ರಕಾರ, ಸಣ್ಣಸಣ್ಣ ರೈತರಿಗೂ ಉತ್ತಮವಾಗಲಿದೆ. ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ದೊರೆಯಲಿದೆ. ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ದೊರೆಯಲಿದೆ ಎಂದು ಸಂತೋಷಭಟ್ಟ ಗೂರೂಜಿ ತಿಳಿಸಿದರು.

ಕಾರ್ಣಿಕೋತ್ಸವ
Previous articleಹಿರಿಯ ಕಲಾವಿದ ಸುರೇಶ ಕುಲಕರ್ಣಿ ನಿಧನ
Next articleಸುಳ್ಳು ಸುದ್ದಿ ಹಬ್ಬಿಸಿದವರು ಕ್ಷಮೆಯಾಚಿಸಲಿ: ದೇಶಪಾಂಡೆ