`ಸಂಪಾಯಿತಲೇ ಪರಾಕ್…’

0
19

ಹೂವಿನಹಡಗಲಿ(ಬಳ್ಳಾರಿ): ರಾಜ್ಯದ ಹೆಸರಾಂತ ಧಾರ್ಮಿಕ ಕ್ಷೇತ್ರ ಮೈಲಾರದಲ್ಲಿ ಮೈಲಾರಲಿಂಗೇಶ್ವರನ ಕಾರ್ಣಿಕೋತ್ಸವವು ಸೋಮವಾರ ಸಂಜೆ ೫:೩೦ಕ್ಕೆ ಗೋಧೂಳಿ ಸಮಯದಲ್ಲಿ ನಡೆಯಿತು.
ಕಪಿಲಮುನಿಗಳ ಪೀಠದ ಗುರುಗಳಾದ ಶ್ರೀಗುರು ವೆಂಕಪ್ಪಯ್ಯ ಒಡೆಯರ್ ಅವರಿಂದ ಆರ್ಶಿವಾದ ಪಡೆದು ಗೊರವಯ್ಯ ರಾಮಣ್ಣ ಸುಮಾರು ೧೫ಅಡಿ ಉದ್ದದ ಬಿಲ್ಲನ್ನು ಏರಿ, ನೆರೆದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ `ಸಂಪಾಯಿತಲೇ ಪರಾಕ್’ ಎಂದು ದೇವವಾಣಿಯನ್ನು ನುಡಿದನು.
ದೇವವಾಣಿಯನ್ನು ಕೇಳುತ್ತಿದ್ದಂತೆಯೇ ಎಲ್ಲರ ಮನದಲ್ಲಿ ಸಂತೋಷ ಕಂಡುಬಂದಿತು. ವರ್ಷದ ಭವಿಷ್ಯವಾಣಿ ಎಂದೆ ಭಾವಿಸುವ ಕಾರ್ಣಿಕ ನುಡಿಯನ್ನು ನೆರೆದ ಭಕ್ತರು ತಮ್ಮದೆ ರೀತಿಯಲ್ಲಿ ವಿಶ್ಲೇಷಣೆ ಮಾಡಿದರು. ರೈತವರ್ಗ ಈಬಾರಿ ಮಳೆ ಬೆಳೆ ಚನ್ನಾಗಿ ಆಗುತ್ತದೆ ಎಂಬ ಆಶಾವಾದದಿಂದ ಸಂತಸಗೊಂಡರು.
೨೦೨೨ರಲ್ಲಿ ಸಹ ಇದೆ ಕಾರ್ಣಿಕ ನುಡಿಯು ಹೊರಬಿದ್ದಿತ್ತು. ಆ ವರ್ಷ ರಾಜ್ಯ ಸುಭಿಕ್ಷಯನ್ನು ಕಂಡಿತ್ತು.
ಈ ಭವಿಷ್ಯವಾಣಿಯಂತೆ ರಾಜ್ಯಕ್ಕೆ ಸಮೃದ್ಧಿ ಮಳೆ ಬೆಳೆ ಆಗಿ ಇದುವರೆಗೂ ರೈತಬಾಂಧವರು ಎದುರಿಸಿದ ಸಂಕಷ್ಟಗಳೆಲ್ಲ ದೂರಾಗಲಿವೆ. ರಾಜ್ಯ ರಾಜಕೀಯದಲ್ಲಿ ಯಾವ ಗೊಂದಲಗಳಿಲ್ಲದೆ ಸರ್ಕಾರ ಸುಭೀಕ್ಷೆಯಿಂದ ನಡೆಯುವುದು ಎಂದು ಕ್ಷೇತ್ರದ ಧರ್ಮಾಧಿಕಾರಿ ಶ್ರಿಗುರು ವೆಂಕಪ್ಪಯ್ಯ ಒಡೆಯರ್ ತಿಳಿಸಿದರು.

Previous articleರಾಜ್ಯಸಭೆ ಚುನಾವಣೆ: ಕಾಂಗ್ರೆಸ್ ಶಾಸಕರಿಗೆ ವಿಪ್ ಜಾರಿ
Next articleನಾನು ಜಿಗಣಿ ಇದ್ದಂತೆ, ರಕ್ತ ಬರುವವರೆಗೂ ಬಿಡುವುದಿಲ್ಲ