ಟೈರ್ ಸ್ಫೋಟ: ಮಂತ್ರಾಲಯ ಮೂಲದ ಮೂವರು ದುರ್ಮರಣ

0
22

ದಾವಣಗೆರೆ: ಮಹೀಂದ್ರ ಪಿಕಪ್ ವಾಹನದ ಹಿಂಬದಿ ಟೈರ್ ಸ್ಫೋಟಗೊಂಡು ಪಲ್ಟಿಯಾದ ಪರಿಣಾಮ ಮೂವರು ದುರ್ಮರಣಕ್ಕೀಡಾದ ಘಟನೆ ಚಿತ್ರದುರ್ಗದಿಂದ ಹರಿಹರ ಕಡೆ ಹೋಗುವ ಎನ್.ಹೆಚ್ -48 ರಸ್ತೆಯ ಭಾನುವಾರ ತಡರಾತ್ರಿ ಸಂಭವಿಸಿದ್ದ, ಮಂತ್ರಾಲಯ ಮೂಲದ ಮೂವರು ದುರ್ಮರಣಕ್ಕೀಡಾಗಿದ್ದಾರೆ.

ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ಸಮೀಪದ ಸಿಂಗರಾಜನಹಳ್ಳಿ ಗ್ರಾಮದ ತಗರಂ ಈರಣ್ಣ (55), ಪದ್ಮ ಕಡಬೂರು ಮಂಡಲದ ನಾಗಲಾಪುರ ಗ್ರಾಮದ ಪಿಂಜಾರಿ ಮಸ್ತಾನ್ ಸಾಬ್ (55) ಚಿನ್ನ ತುಂಬಳಪಂಚಾಯಿತಿ ವ್ಯಾಪ್ತಿಯ ನಾಗಲಾಪುರ ಗ್ರಾಮದ ಪೆದ್ದವೆಂಕಣ್ಣ (46) ಸಾವು ಕಂಡ ದುರ್ದೈವಿಗಳು. ಹುಸೇನ್, ಬಿ. ಲಿಂಗಣ್ಣ, ಸುಧಾಕರ ಹಾಗೂ ನಾಗಣ್ಣ ಮತ್ತಿತರರು ಗಾಯಗೊಂಡಿದ್ದಾರೆ.

ಕರ್ನೂಲು ಜಿಲ್ಲೆಯ ಮಂತ್ರಾಲಯ ತಾಲೂಕಿನ  ಏಳು ವ್ಯಾಪಾರಿಗಳು ಸುಮಾರು ಇಪ್ಪತ್ತು ವರ್ಷಗಳಿಂದ ಮೆಣಸಿನಕಾಯಿ ವ್ಯಾಪಾರ ಮಾಡುತ್ತಿದ್ದರು. ಅಂತೆಯೇ  ಹಾವೇರಿ ಜಿಲ್ಲೆ ಬ್ಯಾಡಿಗೆಗೆ ಮೆಣಸಿನಕಾಯಿ ಖರೀದಿಗೆ ಹೋಗಿದ್ದರು. ನಂತರ  ತೆರಳಿ ವಾಪಸ್ ಬರುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.

ಭಾನುವಾರ ರಾತ್ರಿ 11. 25ರ ಸುಮಾರಿಗೆ ಶಾಮನೂರು ಅಂಡರ್ ಪಾಸ್ ದಾಟಿದ ನಂತರ ಬರುವ ದಾವಣಗೆರೆ ಪಂಜಾಬಿ ಡಾಬಾ ಎದುರು ಚಿತ್ರದುರ್ಗದಿಂದ ಹರಿಹರ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ -48ರಲ್ಲಿ ಹುಸೇನ್ ಎಂಬಾತ ಮಹಿಂದ್ರಾ ಪಿಕ್ ಅಪ್ ವಾಹನ ಚಾಲನೆ ಮಾಡಿಕೊಂಡು ಹೋಗುತ್ತಿದ್ದರು. ತನ್ನ ಪಕ್ಕದ ಸೀಟಿನ ಕ್ಯಾಂಬಿನ್ ನಲ್ಲಿ ಹುಸವಿ, ಹುಸೇನಿ ಮಚ್ಚ ಬಜಾರಿ ಅವರನ್ನು ಕೂರಿಸಿಕೊಂಡು ವಾಹನದಲ್ಲಿ ಮೆಣಸಿನಕಾಯಿ ಲೋಡ್ ಮೇಲೆ ತಗರಂ ಈರಣ್ಣ, ಸುಧಾಕರ, ಪಿಂಜಾರಿ ಮಸ್ತಾನ್ ಸಾಬ್, ಪದ್ಯವಂಕಣ್ಣ ಬೋಯಾ, ಚಿನ್ನರಡ್ಡಿ ಲಿಂಗಣ್ಣ ನಾಗಣ್ಣ ಎಂಬುವವರನ್ನು ಕೂರಿಸಿಕೊಂಡು ತನ್ನ ವಾಹನವನ್ನು ಅತೀ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋದ ಪರಿಣಾಮ ವಾಹನದ ಹಿಂಭಾಗದ ಎಡಬದಿಯ ಟೈರ್ ಬರ್ಸ್ಟ್ ಬರ್ಸ್ ಆಗಿ ವಾಹನ ರಸ್ತೆಯಲ್ಲಿ ಎಡಕ್ಕೆ ಪಲ್ಟಿಯಾಗಿ ಬಿದ್ದಿರುವುದು ಘಟನೆಗೆ ಕಾರಣವಾಗಿದೆ.

Previous articleಉತ್ತರ ನಾನು ಕೊಡಲ್ಲ… ಹೈಕಮಾಂಡ್ ಸರಿಯಾದ ಉತ್ತರ ಕೊಡುತ್ತದೆ
Next articleಮೋದಿ ಹೇಗಿದ್ದಾರೋ ಹಾಗೇ ಇದ್ದಾರೆ