ಹುಬ್ಬಳ್ಳಿ: ಕಳಸಾ ಬಂಡೂರಿ ನಾಲಾ ಯೋಜನೆಯ ಬಗ್ಗೆ ಪ್ರಸ್ತಾಪಿಸಿದ ಸಿದ್ದರಾಮಯ್ಯ, ‘ಮಿಸ್ಟರ್ ಪ್ರಹ್ಲಾದ ಜೋಶಿ.. ಏನ್ರಿ ಮಾಡ್ತಿದ್ದೀರಿ. ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಜೆ.ಪಿ. ನಡ್ಡಾ ಅವರ ಮಾತಿಗೆ ಕೋಲೆ ಬಸವನಂತೆ ತಲೆ ಆಡಿಸುವುದನ್ನು ಬಿಟ್ಟು ಕೆಲಸ ಮಾಡ್ರಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ಅಲ್ಲದೆ, ಜೋಶಿ ಅವರನ್ನೇಕೆ ಲೋಕಸಭೆಗೆ ಕಳಿಸ್ತಿರಿ ಅವರೇನು ಅಭಿವೃದ್ಧಿ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ರಾಜ್ಯದ 25 ಲೋಕಸಭಾ ಸದಸ್ಯರು ಕಳಸಾ ಬಂಡೂರಿ ಯೋಜನೆಯ ಅನುಷ್ಠಾನದ ಬಗ್ಗೆ ಮೋದಿ ಅವರಲ್ಲಿ ಆಗ್ರಹಿಸಬೇಕು. ಕೇಂದ್ರ ಸರ್ಕಾರದ ಪರಿಸರ ಮಂಡಳಿಯಿಂದ ಪರವಾನಗಿ ದೊರೆತ ಮಾರನೇ ದಿನವೇ ರಾಜ್ಯ ಸರ್ಕಾರ ಕಾಮಗಾರಿ ಆರಂಭಿಸಲಿದೆ ಎಂದರು.