ಖರ್ಗೆಗೆ ಝಡ್ ಪ್ಲಸ್ ಭದ್ರತೆ

0
6

ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿ­ಕಾರ್ಜುನ ಖರ್ಗೆಯವರಿಗೆ ಝಡ್ ಪ್ಲಸ್ ಭದ್ರತೆ ಒದಗಿಸಲಾಗಿದೆ. ಖರ್ಗೆಯವರ ಜೀವಕ್ಕೆ ಬೆದರಿಕೆ ಇದೆಯೆಂಬ ಗುಪ್ತಚರ ವರದಿಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಝಡ್‌ಪ್ಲಸ್ ಭದ್ರತೆ ಒದಗಿಸಿದೆ. ಎಸ್‌ಪಿಜಿ ಭದ್ರತೆ ನಂತರ ಗಣ್ಯಾತಿಗಣ್ಯರಿಗೆ ಒದಗಿಸುವ ಎರಡನೇ ಉನ್ನತಹಂತದ ಭದ್ರತಾ ವ್ಯವಸ್ಥೆ ಇದಾಗಿದೆ. ಎಐಸಿಸಿ ಅಧ್ಯಕ್ಷರಿಗೆ ದಿನದ ೨೪ ಗಂಟೆಗಳ ಕಾಲ ಸಿಆರ್‌ಪಿಎಫ್ ಕಮಾಂಡೋಗಳು ಮತ್ತು ೫೫ ಸಿಬ್ಬಂದಿಯ ಭದ್ರತೆ ಕಲ್ಪಿಸಲಾಗುತ್ತದೆ. ಗಣ್ಯರಿಗೆ ಒದಗಿಸುವ ಭದ್ರತೆಯಲ್ಲಿ ಎಸ್‌ಪಿಜಿ, ಝಡ್ ಪ್ಲಸ್, ಝಡ್, ವೈ ಮತ್ತು ಎಕ್ಸ್ ಎಂಬ ಶ್ರೇಣಿಗಳಿವೆ. ಗಣ್ಯರಿಗಿರುವ ಬೆದರಿಕೆಯ ಸ್ವರೂಪ ಆಧರಿಸಿ ಭದ್ರತೆ ಒದಗಿಸಲಾಗುತ್ತದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಝಡ್ ಪ್ಲಸ್ ಭದ್ರತೆಯಿದೆ.

Previous articleಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಉತ್ತರಾಧಿಕಾರಿ ಶಿಷ್ಯ ಸ್ವೀಕಾರ ಸಂಪನ್ನ
Next articleಐಪಿಎಲ್‌ನಿಂದ ಶಮಿ ಔಟ್