Home ನಮ್ಮ ಜಿಲ್ಲೆ ಚಿಕ್ಕಮಗಳೂರು ಡಿಕೆಶಿ ಅತ್ಯುತ್ತಮ ಕಲಾವಿದ: ಸಿ.ಟಿ. ರವಿ

ಡಿಕೆಶಿ ಅತ್ಯುತ್ತಮ ಕಲಾವಿದ: ಸಿ.ಟಿ. ರವಿ

0
187
ct ravi

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅತ್ಯುತ್ತಮ ಕಲಾವಿದ, ನಟರಾಗಿದ್ದರೆ ಆಸ್ಕರ್ ಪ್ರಶಸ್ತಿ ಪಡೆಯಬಹುದಾಗಿತ್ತು ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವ್ಯಂಗ್ಯವಾಡಿದ್ದಾರೆ.
ಭಾರತ್ ಜೋಡೋ ಯಾತ್ರೆಯಲ್ಲಿ ಡಿಕೆಶಿ ಕಣ್ಣೀರು ಹಾಕಿರುವ ಕುರಿತು ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವರು ತುಂಬಾ ಚೆನ್ನಾಗಿ ನಟನೆ ಮಾಡುತ್ತಾರೆ. ಬಣ್ಣ ಹಾಕದೆ, ಗ್ಲಿಸರಿನ್ ಹಾಕದೆ ಕಣ್ಣೀರು ಸುರಿಸುವ ನಟನೆ ಅವರಿಗೆ ಒಲಿದು ಬಂದಿದೆ. ಆದರೆ, ಬೈ ಮಿಸ್ಟೇಕ್ ಅವರು ರಾಜಕೀಯಕ್ಕೆ ಬಂದುಬಿಟ್ಟಿದ್ದಾರೆ. ಈಗ ಅವರು
ಹೀರೋ ಆಗುವ ವಯಸ್ಸು ಮುಗಿದು ಹೋಗಿದೆ. ವಿಲನ್ ಆಗೋಕೂ ತಾಕತ್ತು ಇಲ್ಲದಂತಾಗಿದೆ. ಆದರೆ, ನಟನಾಗೋಕೆ ಪ್ರಯತ್ನಪಟ್ಟರೆ ಪೋಷಕ ಪಾತ್ರಗಳು ಸಿಗಬಹುದು ಎಂದು ಅವರು ಗೇಲಿ ಮಾಡಿದರು.