೫೧.೬೯ ಕೋಟಿ ವಂಚನೆ ಆರೋಪ: ಹೆಸ್ಕಾಂ ನಿವೃತ್ತ ಅಧಿಕಾರಿ ಮಳಿಮಠ ವಿರುದ್ಧ ಪ್ರಕರಣ ದಾಖಲು

0
11

ಹುಬ್ಬಳ್ಳಿ: ಅಧಿಕಾರ ದುರುಪಯೋಗ ಪಡಿಸಿಕೊಂಡು ಸುಳ್ಳು ಲೆಕ್ಕವನ್ನು ತೋರಿಸಿ ಹೆಸ್ಕಾಂಗೆ ೫೧,೬೯ ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ನಿವೃತ್ತ ಉಗ್ರಾಣ ಪಾಲಕ ಬಸವರಾಜ ಮಳಿಮಠ ವಿರುದ್ಧ ಪ್ರಕರಣ ದಾಖಲಾಗಿದೆ.
ಇಲ್ಲಿನ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಅಧಿಕಾರಿ ಶರಣಮ್ಮ ಜಂಗಿನ್ ಅವರು ದೂರು ದಾಖಲಿಸಿದ್ದಾರೆ.
ಆರೋಪಿತರು ೨೦೧೩ ರಿಂದ ೨೦೨೩ ಜುಲೈ ೩೧ ರವರೆಗೆ ಹೆಸ್ಕಾಂ ನಗರ ವಿಭಾಗೀಯ ಉಗ್ರಾಣ ಹಾಗೂ ಗ್ರಾಮೀಣ ವಿಭಾಗೀಯ ಉಗ್ರಾಣ ಪಾಲಕರಾಗಿ ನಿಯೋಜಿಸಿದ್ದ ಹುದ್ದೆಗೆ ನೀಡಿರುವ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ನಂಬಿಕೆ ದ್ರೋಹ, ಸುಳ್ಳು ಸರಕುಪಟ್ಟಿ ದಾಖಲೆ ಸೃಷ್ಟಿ ಮಾಡಿ, ಸುಳ್ಳು ಲೆಕ್ಕವನ್ನು ತೋರಿಸಿ, ನಿಗಮಕ್ಕೆ ವಂಚನೆ ಮಾಡಿರುವ ಆರೋಪದಲ್ಲಿ ನಾಲ್ಕು ಪ್ರತ್ಯೇಕ ಪ್ರಕರಣಗಳಿಂದ ೫೧,೬೯,೪೯,೦೫೪ ರೂಪಾಯಿಗಳ ಮೌಲ್ಯದ ಸಾಮಗ್ರಿಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Previous articleಹಳೆ ಹುಬ್ಬಳ್ಳಿ ಗಲಭೆ ಪ್ರಕರಣ: ಸರ್ಕಾರದ ಬೇಜವಾಬ್ದಾರಿಯಿಂದ ಆರೋಪಿಗಳಿಗೆ ಜಾಮೀನು
Next articleಪವರ್‌ಫುಲ್ ಪಂಚಾಯತ್‌ರಾಜ್‌ಗೆ ನಾಂದಿ ಗ್ರಾಮಸಭೆ ಕಲಾಪ ನೇರಪ್ರಸಾರಕ್ಕೆ ಬುನಾದಿ