Home Advertisement
Home ತಾಜಾ ಸುದ್ದಿ ಹಳೆ ಹುಬ್ಬಳ್ಳಿ ಗಲಭೆ ಪ್ರಕರಣ: ಸರ್ಕಾರದ ಬೇಜವಾಬ್ದಾರಿಯಿಂದ ಆರೋಪಿಗಳಿಗೆ ಜಾಮೀನು

ಹಳೆ ಹುಬ್ಬಳ್ಳಿ ಗಲಭೆ ಪ್ರಕರಣ: ಸರ್ಕಾರದ ಬೇಜವಾಬ್ದಾರಿಯಿಂದ ಆರೋಪಿಗಳಿಗೆ ಜಾಮೀನು

0
54

ಹುಬ್ಬಳ್ಳಿ: ರಾಜ್ಯ ಸರ್ಕಾರದ ಬೇಜವಾಬ್ದಾರಿಯಿಂದ ಹಳೇ ಹುಬ್ಬಳ್ಳಿ ಗಲಭೆಕೋರರಿಗೆ ಜಾಮೀನು ಮಂಜೂರಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಭೆ ಕೋರರ ಮೇಲೆ ಕಾಂಗ್ರೆಸ್ ನಾಯಕರಿಗೆ ಮೊದಲಿಂದಲೂ ಅನುಕಂಪ ಇತ್ತು. ಅವರ ಸರ್ಕಾರ ಬಂದ ಮೇಲೆ ನ್ಯಾಯಾಲಯದಲ್ಲಿ ಸರಿಯಾಗಿ ವಾದ ಮಾಡದೇ ಜಾಮೀನು ಮಂಜೂರಾಗುವಂತೆ ನೋಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಈ ಹಿಂದೆಯೂ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಗೊಳಿಸುವಂತೆ ಮತ್ತು ಪ್ರಕರಣದಿಂದ ಅವರನ್ನು ಖುಲಾಸೆಗೊಳಿಸುವಂತೆ ಕೆಲ ನಾಯಕರು ಪತ್ರ ಬರೆದು ಮನವಿ ಮಾಡುಕೊಂಡಿದ್ದರು ಎಂದರು.
ದೇಶ ದ್ರೋಹ ಸೇರಿದಂತೆ ಹಲವು ಆರೋಪಗಳು ಬಂಧಿತರ ಮೇಲೆ ಇದ್ದವು. ಈ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿಸಿದ ಕಾಂಗ್ರೆಸ್ ಸರ್ಕಾರ, ಮುಂಬರುವ ದಿನಗಳಲ್ಲಿ ಸರಿಯಾದ ಪರಿಣಾಮ ಎದುರಿಸಲಿದೆ ಎಂದರು.

Previous articleಹಳೇಹುಬ್ಬಳ್ಳಿ ಪ್ರಕರಣ; ಮತ್ತೆ ೧೦೮ ಜನರಿಗೆ ಜಾಮೀನು
Next article೫೧.೬೯ ಕೋಟಿ ವಂಚನೆ ಆರೋಪ: ಹೆಸ್ಕಾಂ ನಿವೃತ್ತ ಅಧಿಕಾರಿ ಮಳಿಮಠ ವಿರುದ್ಧ ಪ್ರಕರಣ ದಾಖಲು