ಕಾರ ಪಾರ್ಕಿಂಗ್‌ ವಿಚಾರ: ಕಾಂಗ್ರೆಸ್ ಮುಖಂಡನ ಗೂಂಡಾವರ್ತನೆ

0
16

ಬೆಳಗಾವಿ: ಬೆಳಗಾವಿಯಲ್ಲಿ ಕಾರ ಪಾರ್ಕಿಂಗ್‌ ವಿಚಾರವಾಗಿ ಕಾಂಗ್ರೆಸ್ ಮುಖಂಡ ಗೂಂಡಾವರ್ತನೆ ಮಾಡಿದ ಘಟನೆ ನಡೆದಿದೆ.
ಪಾರ್ಕಿಂಗ್ ವಿಚಾರವಾಗಿ ಡಾಕ್ಟರ್‌ ಒಬ್ಬರಿಗೆ ಕಪಾಳ ಮೋಕ್ಷ ಮಾಡಿ ಗೂಂಡಾವರ್ತನೆ ಮೆರೆದಿದ್ದಾರೆ. ಗೂಂಡಾವರ್ತನೆ ತೋರಿದ ವ್ಯಕ್ತಿ ಕಾಂಗ್ರೆಸ್ ಮುಖಂಡ ಆರೀಫ್ ದೇಸಾಯಿ. ಬೆಳಗಾವಿ ಸದಾಶಿವ ನಗರದಲ್ಲಿ ಈ ಘಟನೆ ನಡೆದಿದ್ದು, ಡಾ. ಪ್ರದೀಪ್ ಎಂಬಾತನ ಮೇಲೆ ಹಲ್ಲೆ ಮಾಡಿ ಅವಾಚ್ಯಶಬ್ಧಗಳಿಂದ ನಿಂದನೆ ಮಾಡಿದ್ದಾನೆ, ಪತಿ ಮೇಲೆ ಕಾಂಗ್ರೆಸ್ ಮುಖಂಡ ಹಲ್ಲೆ ಮಾಡ್ತಿರೋ ವೇಳೆ ವಿಡಿಯೋ ಮಾಡಿದ ಪತ್ನಿ ಶೃತಿ, ನೀವು ಮಾಡುತ್ತಿರುವುದು ತಪ್ಪು ಅಂತಾ ಹೇಳಿದ್ರೂ ಹಲ್ಲೆ ಮಾಡಿದ್ದಾನೆ, ಮನೆ ಮುಂದೆ ಕಾರ ನಿಲ್ಲಿಸಿದ ವಿಚಾರವಾಗಿ ಆರಂಭವಾದ ಗಲಾಟೆಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ, ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಕುರಿತು ಎಪಿಎಂಸಿ ಠಾಣೆಯಲ್ಲಿ ಯಾವುದೇ ಕೇಸ್ ದಾಖಲಾಗಿಲ್ಲ.

Previous articleಕುಪೇಂದ್ರ ರೆಡ್ಡಿ ಕಣಕ್ಕೆ
Next articleತಪ್ಪನ್ನು ಪ್ರತಿಭಟಿಸಿದವರ ವಿರುದ್ಧ ಮೊಕದ್ದಮೆ