ಅಪರಿಚಿತ ವಾಹನಕ್ಕೆ ಬೈಕ್ ಡಿಕ್ಕಿ : ಇಬ್ಬರು ಬೈಕ್ ಸವಾರರ ಸಾವು

0
26

ವಿಜಯಪುರ : ರಾಷ್ಟ್ರೀಯ ಹೆದ್ದಾರಿ ೨೧೮ ರ ಕಾರಜೋಳದ ಬಸವೇಶ್ವರ ಸಕ್ಕರೆ ಫ್ಯಾಕ್ಟರಿ ಸಮೀಪ ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದು ಇಬ್ಬರು ಬೈಕ್ ಸವಾರರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಕಳೆದ ತಡರಾತ್ರಿ ನಡೆದಿದೆ.
ಅಪಘಾತದಲ್ಲಿ ಕಾಖಂಡಕಿ ಗ್ರಾಮದ ರಾಜೇಂದ್ರ ಜಗದೀಶ ಬಿಸನಾಳ(೨೮), ರಾಹುಲ್ ಈರಣ್ಣ ಕಂಬಾರ(೨೬) ಎಂಬ ಇಬ್ಬರು ಬೈಕ್ ಸವಾರರು. ರಾತ್ರಿ ೧೧ ರ ಸುಮಾರಿಗೆ ಬೈಕ್‌ನಲ್ಲಿ ಹೋಗುವ ವೇಳೆ ರಸ್ತೆ ಪಕ್ಕದಲ್ಲಿ ನಿಂತಿದ್ದ ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಈ ಕುರಿತು ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleವಾಹನ ಸವಾರರಿಗೆ ಸಿಹಿ ಸುದ್ದಿ​: HSRP ನಂಬರ್​ ಪ್ಲೇಟ್​​ ಅಳವಡಿಸುವ ಅವಧಿ ವಿಸ್ತರಣೆ
Next articleಜೋಶಿಯವರೇ ಅಭ್ಯರ್ಥಿ, ಟಿಕೆಟ್ ಬದಲಾವಣೆ ಚರ್ಚೆ ಅರ್ಥವಿಲ್ಲದ್ದು