ಭಾಷಣ ಮಾಡುತ್ತಾರೆಯೇ ಹೊರತು…

0
31

ಹರಿಹರ: ರಾಜ್ಯದ ಬಿಜೆಪಿ ನಾಯಕರು ಕೇವಲ ಭಾಷಣ ಮಾಡುತ್ತಾರೆಯೇ ಹೊರತು, ಕೇಂದ್ರದೊಂದಿಗೆ ಸಂವಹನ ನಡೆಸಿ ಪರಿಹಾರ ದೊರಕಿಸಿ ಕೊಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ಇಂದು ಹರಿಹರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು ನವದೆಹಲಿಯಲ್ಲಿ ತೆರಿಗೆ ಹಂಚಿಕೆಯ ಬಗ್ಗೆ ರಾಜ್ಯದ ಪ್ರತಿಭಟನೆಯನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪವರು ಟೀಕಿಸಿದ್ದಾರೆ, ಹಾಗಾದರೆ ರಾಜ್ಯಕ್ಕೆ ಕೇಂದ್ರದಿಂದ ಆದ ಅನ್ಯಾಯ ವಿರೋಧಿಸುವುದು ತಪ್ಪೇ?
ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪ ಅವರು ಕೇಂದ್ರದ ವಿರುದ್ಧ ಧ್ವನಿ ಎತ್ತಲಿಲ್ಲ. ನಾವು 100 ರೂ. ಕಟ್ಟಿದರೆ ಕೇವಲ 13 ರೂ. ರಾಜ್ಯಕ್ಕೆ ವಾಪಸ್ಸು ಬರುತ್ತಿದೆ. ರಾಜ್ಯದಿಂದ ₹4,30,000 ಕೋಟಿ ತೆರಿಗೆ ಸಂಗ್ರಹವಾದರೆ, ನಮಗೆ 50,257 ಕೋಟಿ ರೂ.ಮಾತ್ರ ಮರಳಿ ಬರುತ್ತಿದೆ. ಕೇಂದ್ರದ ಈ ಧೋರಣೆಯನ್ನು ವಿರೋಧಿಸಲಾಗುತ್ತಿದೆ.
ಬರನಿರ್ವಹಣೆ ಸಂಬಂಧ ಕುಡಿಯುವ ನೀರು, ಮೇವು, ಉದ್ಯೋಗ ನೀಡಲಾಗುತ್ತಿದ್ದು, ಒಟ್ಟು 860 ಕೋಟಿ ರೂ.ಗಳನ್ನು ಎಲ್ಲ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಜನರು ಗುಳೇ ಹೋಗದಂತೆ ತಪ್ಪಿಸಲು ಹಾಗೂ ಅವರ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಕ್ರಮಕೈಗೊಳ್ಳಲು ಸ್ಪಷ್ಟ ನಿರ್ದೇಶನ ನೀಡಲಾಗಿದೆ. ತಾತ್ಕಾಲಿಕ ಪರಿಹಾರವಾಗಿ ಒಬ್ಬ ರೈತನಿಗೆ ತಲಾ 2,000 ದಂತೆ ಸುಮಾರು 34 ಲಕ್ಷ ರೈತರಿಗೆ 650 ಕೋಟಿ ರೂ. ನೀಡಲಾಗಿದೆ.
ಐದು ತಿಂಗಳು ಕಳೆದರೂ ಕೇಂದ್ರ ಬಿಜೆಪಿ ಸರ್ಕಾರ ಬರಪರಿಹಾರ ನೀಡಿಲ್ಲ. ರಾಜ್ಯದ ಬಿಜೆಪಿ ನಾಯಕರು ಕೇವಲ ಭಾಷಣ ಮಾಡುತ್ತಾರೆಯೇ ಹೊರತು, ಕೇಂದ್ರದೊಂದಿಗೆ ಸಂವಹನ ನಡೆಸಿ ಪರಿಹಾರ ದೊರಕಿಸಿ ಕೊಡುತ್ತಿಲ್ಲ ಎಂದರು.

Previous articleಶ್ರೇಷ್ಠತೆ ಎಂಬುದು ಜಾತಿಯಿಂದ ಬರುವುದಲ್ಲ
Next articleಸರಳ ಸುಂದರ ಪ್ರೇಮ್ ಕಹಾನಿ