ಯೆಮನ್ ದೇಶಕ್ಕೆ ಹೊಸ ಪ್ರಧಾನಿ ನೇಮಕ

0
16

ಸನಾ: ಯೆಮನ್‌ನ ವಿದೇಶಾಂಗ ಸಚಿವರಾಗಿದ್ದ ಅಹ್ಮದ್ ಅವದ್ ಬಿನ್ ಮುಬಾರಕ್ ಅವರನ್ನು ದೇಶದ ಹೊಸ ಪ್ರಧಾನಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಅಧಿಕೃತ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ. ಈ ಮೊದಲು ಮೈನ್ ಅಬ್ದುಲ್ಮಲಿಕ್ ಸಯೀದ್ ಪ್ರಧಾನಿಯಾಗಿದ್ದರು.
ಹೌತಿ ಬಂಡುಕೋರರ ಅತಿಯಾದ ದಾಳಿಯಿಂದ ಕಂಗೆಟ್ಟಿರುವ ದೇಶ ಸಂದಿಗ್ನ ಪರಿಸ್ಥಿತಿಯಲ್ಲಿದ್ದು, ಅಹ್ಮದ್ ಅವದ್ ಬಿನ್ ಮುಬಾರಕ್ ಅವರಿಗೆ ನೂತನ ಪ್ರಧಾನಿಯ ಸ್ಥಾನ ನೀಡಲಾಗಿದೆ. ಈಗಾಗಲೇ ಕೆಂಪು ಸಮುದ್ರದಲ್ಲಿಂದ ಹೌತಿ ಬಂಡುಕೋರರ ನಿರಂತರ ದಾಳಿಯಿಂದಾಗಿ ಅರೇಬಿಯನ್ ಪೆನಿನ್ಸುಲಾದ ರಾಷ್ಟçವಾಗಿರುವ ಯೆಮನ್ ಹೆಚ್ಚಿನ ಭೀತಿ ಹಾಗೂ ಉದ್ವಿಗ್ನತೆಯನ್ನು ಅನುಭವಿಸುತ್ತಿದೆ.

Previous articleಫೇಸ್‌ಬುಕ್‌ಗೆ ೨೦ ವರ್ಷ
Next articleಪಟಾಕಿ ಕಾರ್ಖಾನೆಯಲ್ಲಿ ದುರಂತ: ೧೧ ಜನರ ಸಾವು