ಶಿವಲಿಂಗದ ಮೇಲೆ ಗೀಚಿದವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ

0
10

ಶಿರಸಿ: ತಾಲೂಕಿನ ನರೇಬೈಲ್ ಗ್ರಾಮದ ಶ್ರೀ ಸೋಮೇಶ್ವರ ದೇವಸ್ಥಾನದ ಶಿವಲಿಂಗದ ಮೇಲೆ ಬರೆದ ಪ್ರಕರಣವನ್ನು ೨೪ ಗಂಟೆಯಲ್ಲಿ ಪೊಲೀಸರು ಭೇದಿಸಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೯೯ ಅಂಕಗಳಿಸಿರುವ ವಿದ್ಯಾರ್ಥಿಯೊಬ್ಬ ಐಐಟಿ ಮತ್ತು ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ನಿರೀಕ್ಷಿತ ರ‍್ಯಾಂಕ್ ಬರಲಿಲ್ಲ ಎಂಬ ಕಾರಣಕ್ಕೆ ೨೦೨೪ರ ಪರೀಕ್ಷೆಯಲ್ಲಾದರೂ ನಿರೀಕ್ಷಿತ ರ‍್ಯಾಂಕ್ ಬರಲೆಂದು ಶಿವಲಿಂಗದ ಮೇಲೆ ಚಾಕ್‌ಪೀಸ್‌ನಿಂದ ಬರೆದಿದ್ದನು.
ಡಿವೈಎಸ್‌ಪಿ ಗಣೇಶ ಕೆ.ಎಲ್. ಮಾರ್ಗದರ್ಶನದಲ್ಲಿ, ಸಿಪಿಐ ಸೀತಾರಾಮ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಪಿಎಸ್‌ಐ ದಯಾನಂದ ಜೋಗಳೆಕರ್, ಪ್ರತಾಪ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

Previous articleಶಿರಸಿಯ ಮಾನಸ ಹೆಗಡೆಗೆ ಐರ್ಲೆಂಡ್‌ನಲ್ಲಿ ಪಿಎಚ್‌ಡಿ ಪ್ರದಾನ
Next articleತೆರಿಗೆ ಹಂಚಿಕೆ: ರಾಜ್ಯಕ್ಕೆ ೧.೮೭ಲಕ್ಷ ಕೋಟಿ ಕೊಕ್ಕೆ