ಮುಂಬೈನ ಆರು ಸ್ಥಳಗಳಲ್ಲಿ ಬಾಂಬ್‌: ಪೊಲೀಸರ ತೀವ್ರ ಕಟ್ಟೆಚ್ಚರ, ತಪಾಸಣೆ

0
10

ಮುಂಬೈ: ಮುಂಬೈನ 6 ಸ್ಥಳಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಮುಂಬೈ ಟ್ರಾಫಿಕ್​ ಪೊಲೀಸ್​ ಕಂಟ್ರೋಲ್​ ರೂಂಗೆ ಅಪರಿಚಿತರು ಬೆದರಿಕೆ ಕರೆ ಮಾಡಿದ್ದಾರೆ.
ಮುಂಬೈ ಸಂಚಾರ ಪೊಲೀಸ್ ನಿಯಂತ್ರಣ ಕೊಠಡಿಗೆ ಈ ಮಾಹಿತಿ ರವಾನೆಯಾಗಿದ್ದು, ಸಂದೇಶ ಕಳುಹಿಸಿದವ ಬಗ್ಗೆ ಮಾಹಿತಿ ಪತ್ತೆ ಹಚ್ಚುವ ಕೆಲಸವನ್ನು ಪೊಲೀಸರು ಆರಂಭಿಸಿದ್ದಾರೆ. ಬಾಂಬ್ ಪತ್ತೆ ಮತ್ತು ವಿಲೇವಾರಿ ಪತ್ತೆ ದಳ(BDDS) ಮತ್ತು ಶ್ವಾನದಳ ಕೂಡಲೇ ಸ್ಥಳಗಳಿಗೆ ತೆರಳಿ ತೀವ್ರ ತಪಾಸಣೆ ನಡೆಸಿದ್ದು ಯಾವುದೇ ಬಾಂಬ್ ಇಟ್ಟಿರುವುದು ಪತ್ತೆಯಾಗಿಲ್ಲ. ರಾಜ್ಯ ಪೊಲೀಸ್ ಮಹಾನಿರ್ದೇಶಕರ ಹೆಚ್ಚುವರಿ ಹೊಣೆ ಹೊತ್ತಿರುವ ಕಮಿಷನರ್ ವಿವೇಕ್ ಫನ್ಸಾಲ್ಕರ್ ನೇತೃತ್ವದ ಮುಂಬೈ ಪೊಲೀಸರು, ಈ ನಕಲಿ ಸಂವಹನಗಳನ್ನು ಕಳುಹಿಸುವ ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಎಲ್ಲಾ ನಮೂದಿಸಲಾದ ಸೈಟ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸಿದರೂ, ಸದ್ಯಕ್ಕೆ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ. ಪೊಲೀಸರು ಅಪರಿಚಿತರ ಮೇಲೆ ಕೇಸು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Previous articleಲಕ್ಷದ್ವೀಪದಲ್ಲಿ ಹೂಡಿಕೆಯ ಮದ್ದು ಮಾಲ್ಡೀವ್ಸ್‌ಗೆ ಗುದ್ದು
Next articleಕೆರೆ ಮಿತ್ರ ಹಾಗೂ ಹಸಿರು ಮಿತ್ರರಾಗಲು ಅವಕಾಶ