ಬಾಲಿ(ಇಂಡೋನೇಷ್ಯಾ): ಭಾರತೀಯ ಕ್ರಿಕೆಟ್ ಕೌನ್ಸಿಲ್‌ನ (ಬಿಸಿಸಿಐ) ಕಾರ್ಯದರ್ಶಿ ಜೈ ಶಾ ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರಾಗಿ ಸತತ ಮೂರನೇ ಅವಧಿಗೆ ಮುಂದುವರಿದಿದ್ದಾರೆ.
ಇಲ್ಲಿ ನಡೆದ ಎರಡು ದಿನಗಳ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ವಾರ್ಷಿಕ ಸಾಮಾನ್ಯ ಸಭೆ ಬುಧವಾರ ಕೊನೆಗೊಂಡಿತು. ಎಸಿಸಿ ಅಧ್ಯಕ್ಷ ಜೈ ಶಾ ಕುರಿತು ಸಭೆಯಲ್ಲಿ ಸರ್ವಾನುಮತದಿಂದ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಅವರ ಅಧಿಕಾರಾವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ.
ಈ ಸಭೆಯಲ್ಲಿ ಏಷ್ಯಾದ ಎಲ್ಲಾ ಕ್ರಿಕೆಟ್ ಮಂಡಳಿಗಳ ಸದಸ್ಯರು ಭಾಗವಹಿಸಿದ್ದರು. ಎಸಿಸಿ ಅಧ್ಯಕ್ಷರ ಅಧಿಕಾರಾವಧಿ ೨ ವರ್ಷ ಮಾತ್ರ. ಬಾಂಗ್ಲಾದೇಶದ ನಜ್ಮುಲ್ ಹಸನ್ ಅವರ ಸ್ಥಾನಕ್ಕೆ ೨೦೨೧ರಲ್ಲಿ ಜೈ ಶಾ ಈ ಹುದ್ದೆಯನ್ನು ವಹಿಸಿಕೊಂಡರು.