ಶೆಟ್ಟರ್‌ ಘನತೆಗೆ ಶೋಭೆ ತರುವುದಿಲ್ಲ

0
10

ಬೆಂಗಳೂರು: ಜಗದೀಶ್ ಶೆಟ್ಟರ್ ತರಾತುರಿಯಲ್ಲಿ ಪಕ್ಷ ತೊರೆದಿರುವುದು ಅವರ ಘನತೆಗೆ ಶೋಭೆ ತರುವುದಿಲ್ಲ ಎಂದು ಸಚಿವ ಎಂ. ಬಿ. ಪಾಟೀಲ್‌ ಹೇಳಿದ್ದಾರೆ.
ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ಕುರಿತು ಮಾತಾನಡಿರುವ ಅವರು ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ತೊರೆದಿದ್ದು ದುಃಖಕರ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಅವರದ್ದೇ ಮತ ಕ್ಷೇತ್ರದಲ್ಲಿ ಟಿಕೆಟ್ ನೀಡದೆ ವಂಚನೆ ಮಾಡಿತ್ತು. ಆ ವೇಳೆ ಕಾಂಗ್ರೆಸ್ ಪಕ್ಷ ಅವರನ್ನು ಬರ ಮಾಡಿಕೊಂಡು, ಟಿಕೆಟ್ ನೀಡಿ ಗೌರವಿಸಿತ್ತು. ಅವರು ಚುನಾವಣೆಯಲ್ಲಿ ಪರಾಭವಗೊಂಡರು ಅವರನ್ನು ವಿಧಾನಪರಿಷತ್ತಿನ ಸದಸ್ಯರನ್ನಾಗಿ ಮಾಡಿದ್ದೆವು. ಈಗ ತರಾತುರಿಯಲ್ಲಿ ನಮ್ಮ ಪಕ್ಷ ತೊರೆದಿರುವುದು ಅವರ ಘನತೆಗೆ ಶೋಭೆ ತರುವುದಿಲ್ಲ! ಎಂದಿದ್ದಾರೆ.

Previous articleಕಾಂಗ್ರೆಸ್ ಪಕ್ಷದಲ್ಲಿ ಶೆಟ್ಟರ್‌ ಅವರಿಗೆ ಯಾವುದೇ ಅನ್ಯಾಯ, ಅವಮಾನ ಆಗಿಲ್ಲ
Next articleಇದು ಚುನಾವಣೆ ಗಿಮಿಕ್ ಅಷ್ಟೇ