ಶೃಂಗೇರಿ ಶ್ರೀ ಶಾರದ ಪೀಠದ ನೂತನ ಸಿಇಒ ಆಗಿ ಪಿ.ಎ.ಮುರಳಿ ನೇಮಕ

0
7

ಶೃಂಗೇರಿ: ಶ್ರೀ ಶಾರದ ಪೀಠದ ನೂತನ ಸಿಇಒ ಆಗಿ ಪಿ. ಎ. ಮುರಳಿ ಅವರನ್ನು ನೇಮಕ ಮಾಡಲಾಗಿದೆ.
ಈ ಹಿಂದೆ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮೀಜಿಯವರ ನಿರ್ದೇಶನದಂತೆ 1989ರಲ್ಲಿ ಡಾ. ವಿ. ಆರ್. ಗೌರಿಶಂಕರ್ ಅವರನ್ನು ಶೃಂಗೇರಿ ಮಠದ ಆಡಳಿತಾಧಿಕಾರಿ ಮತ್ತು ಸಿಇಒ ಆಗಿ ನೇಮಕ ಮಾಡಲಾಗಿತ್ತು. ಇದಾದ ಬಳಿಕ ಸುಮಾರು 35 ವರ್ಷಗಳ ಕಾಲ ಡಾ. ವಿ ಆರ್ ಗೌರಿಶಂಕರ್ ಮಠದ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಇದೀಗ ಶ್ರೀ ಶಾರದ ಪೀಠದ ನೂತನ ಸಿಇಒ ಮತ್ತು ಆಡಳಿತಾಧಿಕಾರಿ ಆಗಿ ಪಿ. ಎ. ಮುರಳಿ ಅವರನ್ನು ನೇಮಿಸಲಾಗಿದೆ. ವಿ.ಆರ್ ಗೌರಿಶಂಕರ್ ಅವರು ನೂತನ ಸಿಇಒ ಅವರಿಗೆ ಮುಖ್ಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

Previous articleಕರ್ನಾಟಕಕ್ಕೆ ಹೆಚ್ಚುವರಿ ಪ್ರಾದೇಶಿಕ ಕಚೇರಿ
Next articleಕಾಂಗ್ರೆಸ್ ಪಕ್ಷದಲ್ಲಿ ಶೆಟ್ಟರ್‌ ಅವರಿಗೆ ಯಾವುದೇ ಅನ್ಯಾಯ, ಅವಮಾನ ಆಗಿಲ್ಲ