ಹುಬ್ಬಳ್ಳಿಯಲ್ಲಿ ಐಟಿ ಅಧಿಕಾರಿಗಳ ದಾಳಿ

0
10

ಹುಬ್ಬಳ್ಳಿ: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಹುಬ್ಬಳ್ಳಿ ಉದ್ಯಮಿ‌ಯೊಬ್ಬರ ಮನೆ, ಕಚೇರಿಯ ಮೇಲೆ ದಾಳಿ ಮಾಡಿರುವ ಐಟಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ.
ಉದ್ಯಮಿ ಗಣೇಶ ಸೇಟ್ ಅವರಿಗೆ ಸೇರಿದ ಅಶೋಕ ನಗರದ ನಿವಾಸ, ಕೆಜಿಪಿ ಜ್ಯುವೆಲರಿ, ಜವಳಿ ಅಂಗಡಿ ಹಾಗೂ ಹೋಟೆಲ್ ಮೇಲೆ 50 ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿದೆ. ಹುಬ್ಬಳ್ಳಿಯ ಆಶೋಕ ನಗರದಲ್ಲಿರುವ ಗಣೇಶ ಸೇಟ್ ನಿವಾಸದಲ್ಲಿ ಸತತ 10 ಗಂಟೆಗಳಿಂದ ಶೋಧ ಕಾರ್ಯ ಮುಂದುವರೆದಿದೆ. ಸ್ಟೇಶನ್ ರಸ್ತೆಯಲ್ಲಿರುವ ಕೆಜಿಪಿ ಜ್ಯುವಲರ್ಸ್ ನಲ್ಲಿ ಉದ್ಯಮಿ ಗಣೇಶ ಶೇಠ್ ಪುತ್ರ ಶ್ರೀಗಂಧ ಸೇಠ ಅವರನ್ನು ಕರೆತಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಗಣೇಶ ಒಡೆತನದಲ್ಲಿರುವ ನವನಗರದ ರಾಯಲ್ ರಿಡ್ಜ್ ಹೋಟೆಲ್, ಹೊಸಪೇಟೆಯಲ್ಲಿರುವ ತಾರಾ ಪ್ಯಾಲೇಸ್‌ ಮೇಲೂ ದಾಳಿ ನಡೆದಿದೆ.

Previous articleಕಣ್ಣನ್ ಅವರ ತಪ್ಪಿಲ್ಲ
Next article“ಮೌಲ್ಯಮಾಪನ” ಕೆಲಸಗಳಿಂದ ಮಾಡಬೇಕೇ ಹೊರತು ಆತನ ಭಕ್ತಿಯಿಂದಲ್ಲ