ಪೂಜಿಸಲೆಂದೇ ಹೂಗಳ ತಂದೆ ಹಾಡಿಗೆ ಮೆಚ್ಚುಗೆ
ಬೆಂಗಳೂರು : ಕನ್ನಡದ ಹಾಡು ‘ಪೂಜಿಸಲೆಂದೇ ಹೂಗಳ ತಂದೆ’ ಹಾಡಿಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಅವರು ಯೂಟ್ಯೂಬ್ನಲ್ಲಿ ಹಾಡಿರುವ, ‘ಪೂಜಿಸಲೆಂದೇ ಹೂಗಳ ತಂದೆ’ ಹಾಡಿನ ಲಿಂಕ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪ್ರಧಾನಿ, ಇಂತಹ ಪ್ರಯತ್ನಗಳು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಿ ಮುಂದೆ ಕೊಂಡೊಯ್ಯುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿಯವರಿಂದ ಪ್ರಶಂಸೆ ಪಡೆದ ಬಗ್ಗೆ ಸಂತಸ ವ್ಯಕ್ತಪಡಿಸಿದ ಶಿವಶ್ರೀ ಸ್ಕಂದ ಪ್ರಸಾದ್, “ಇದು ನನಗೆ ತುಂಬಾ ಸಂತೋಷದ ಕ್ಷಣವಾಗಿದೆ … ನಾನು ಭಾವನೆಗಳನ್ನು ವಿವರಿಸಲು ನನಗೆ ಪದಗಳಿಲ್ಲ. ಇದು ಸ್ವತಃ ಭಗವಾನ್ ರಾಮನ ಆಶೀರ್ವಾದ…” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ “ತುಂಬಾ ಧನ್ಯವಾದಗಳು ಸರ್! ಇದು ಕಲ್ಪನೆಗೂ ಮೀರಿದ ಗೌರವ. ನಿಮಗೆ ನನ್ನ ಪ್ರಣಾಮಗಳು.” ಎಂದಿದ್ದಾರೆ.























